
ಮಲ್ಪೆ: ದಿನಾಂಕ:11-02-2025(ಹಾಯ್ ಉಡುಪಿ ನ್ಯೂಸ್) ತನ್ನ ಗಂಡನು ತಂಗಿಯ ಮಾತು ಕೇಳಿ ವಿನಾ ಕಾರಣ ತನಗೆ ಮತ್ತು ತನ್ನ ಮಗಳಿಗೆ ಹಾಗೂ ಮನೆಯವರಿಗೆ ಹಲ್ಲೆ ನಡೆಸಿದ್ದಾನೆ ಎಂದು ಮಹಿಳೆಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.
ಮಲ್ಪೆ ಕೊಡವೂರು ಗ್ರಾಮದ ನಿವಾಸಿ ಗೌತಮಿ (40) ಎಂಬವರು 17 ವರ್ಷಗಳ ಹಿಂದೆ ಸಚಿನ್ ಎಂಬುವವರೊಂದಿಗೆ ವಿವಾಹವಾಗಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ದಿನಾಂಕ 09/02/2025 ರಂದು ಗೌತಮಿರವರ ಗಂಡನ ತಂಗಿ ಭಾರತಿ ಗೌತಮಿರವರ ಮನೆಯಲ್ಲಿ ತಂಗಿದ್ದು ಸಾಯಂಕಾಲ ಸಮಯಕ್ಕೆ ಭಾರತಿರವರು ವಿನಾಕಾರಣ ಗೌತಮಿರವರಿಗೆ ಕೆನ್ನೆಗೆ ಹೊಡೆಯುವುದಾಗಿ ಹೇಳಿದ್ದು, ಅದನ್ನು ಗೌತಮಿರವರು ಪ್ರಶ್ನಿಸಿದಾಗ ಅವರ ಗಂಡ ಸಚಿನ್ ಹಾಗೂ ಭಾರತಿರವರು ಗೌತಮಿರವರೊಂದಿಗೆ ಜಗಳವಾಡಿ ಹೊಡೆಯಲು ಬಂದಿದ್ದು, ನೆಲಕ್ಕೆ ತಳ್ಳಿ ಹಾಕಿದ್ದು, ಗೌತಮಿರವರ ಮುಖಕ್ಕೆ ಸಚಿನ್ ಕಾಲಿನಿಂದ ಒದ್ದ ಪರಿಣಾಮ ಗೌತಮಿರವರ ಮೂಗಿನಿಂದ ರಕ್ತ ಸೋರಿಕೆಯಾಗಿದ್ದು, ಅಲ್ಲದೇ ತಲೆಗೆ ಪೆಟ್ಟಾಗಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನು ಗೌತಮಿಯವರ ತಾಯಿ ಹಾಗೂ ತಂಗಿ ಸಪ್ತಮಿ ಪ್ರಶ್ನಿಸಲು ಬಂದಾಗ ಸಚಿನ್‌ನು ಗೌತಮಿಯ ತಂಗಿ ಸಪ್ತಮಿಗೆ ಹೊಡೆದು ತಾಯಿಯನ್ನು ದೂಡಿ ಹಾಕಿದ್ದಲ್ಲದೆ ಹಾಗೂ ಗೌತಮಿರವರ ಮಗಳು ಯಶಿಕಾಳಿಗೆ ಕೂಡಾ ಹೊಡೆದಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಗೌತಮಿರವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ: 85, 115(2), 352 R/W 3(5) BNS ರಂತೆ ಪ್ರಕರಣ ದಾಖಲಾಗಿದೆ.