
ಕುಂದಾಪುರ: ದಿನಾಂಕ: 11/02/2025 (ಹಾಯ್ ಉಡುಪಿ ನ್ಯೂಸ್) ಕೆಂಚನೂರು ಗ್ರಾಮದ ಸರಕಾರಿ ಹಾಡಿ ಯೊಂದರಲ್ಲಿ ನಡೆಯುತ್ತಿದ್ದ ಕೋಳಿ ಅಂಕ ಜುಗಾರಿ ಅಡ್ಡೆಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಭೀಮಾಶಂಕರ ಸಿನ್ನೂರ ಅವರು ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದಾರೆ.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಭೀಮಾ ಶಂಕರ ಸಿನ್ನೂರ ಅವರಿಗೆ ದಿನಾಂಕ: 10-02-2025ರಂದು ಕುಂದಾಪುರ ತಾಲೂಕು ಕೆಂಚನೂರು ಗ್ರಾಮದ ಕಾವ್ರಾಡಿ ಮನೆಗೆ ಹೋಗುವ ದಾರಿಯಲ್ಲಿ ತಲೆಗದ್ದೆ ಎಂಬಲ್ಲಿರುವ ಸರಕಾರಿ ಹಾಡಿಯಲ್ಲಿ ಕೋಳಿ ಅಂಕ ಜುಗಾರಿ ಆಟ ನಡೆಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಕೂಡಲೇ ದಾಳಿ ನಡೆಸಿದ್ದಾರೆ . ಮಾಹಿತಿ ಬಂದ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ಆಟದಲ್ಲಿ ಭಾಗಿಯಾದ ಅರುಣ ಎಂಬಾತನನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ .
ಪ್ರವೀಣ, ರಮೇಶ, ನಾಗರಾಜ , ಅಭಿಷೇಕ ಮತ್ತು ಸೋನು ಹಾಗೂ ಇತರರು ಓಡಿಹೋಗಿದ್ದಾರೆ ಎನ್ನಲಾಗಿದೆ. ಕೋಳಿ ಅಂಕ ಜುಗಾರಿ ಆಟಕ್ಕೆ ಬಳಸಿದ 5 ಕೋಳಿ, ಕೋಳಿ ಬಾಳು, ಕೋಳಿ ಅಂಕ ಆಟಕ್ಕೆ ಬಳಸಿದ ನಗದು ಹಣ 1000/- ರೂಪಾಯಿಯನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ .
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ:112 BNS, 87, 93 KP Act & 11 (1) (A) Animal Cruelty Act ರಂತೆ ಪ್ರಕರಣ ದಾಖಲಾಗಿದೆ.