
ಮಣಿಪಾಲ: ದಿನಾಂಕ: 10-02.2025 (ಹಾಯ್ ಉಡುಪಿ ನ್ಯೂಸ್ ) ಕಾಯಿನ್ ಸರ್ಕಲ್ ಬಳಿ ಅಕ್ರಮವಾಗಿ ನಿಷೇಧಿತ ಇ- ಸಿಗರೇಟುಗಳನ್ನು ಮಾರಾಟ ಮಾಡಲು ತರುತ್ತಿದ್ದ ವ್ಯಕ್ತಿ ಯನ್ನು ಮಣಿಪಾಲ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಅನಿಲ್ ಕುಮಾರ್ ಡಿ ಅವರು ಬಂಧಿಸಿದ್ದಾರೆ.
ಮಣಿಪಾಲ ಪೊಲೀಸ್ ಠಾಣೆ ಪಿಎಸ್ಐ ಯವರಾದ ಅನಿಲ್ ಕುಮಾರ್ ಡಿ ಅವರಿಗೆ ದಿನಾಂಕ 09-02-2025 ರಂದು ಬಂದ ಖಚಿತ ವರ್ತಮಾನದಂತೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಕಾಯಿನ್ ಸರ್ಕಲ್ ಬಳಿ ಪೊಲೀಸ್ ಸಿಬ್ಬಂಧಿಯವರೊಂದಿಗೆ ದಾಳಿಮಾಡಿ ಅಕ್ರಮವಾಗಿ ನಿಷೇದಿತ ಇ – ಸಿಗರೇಟ್ ಗಳನ್ನು ಮಾರಾಟ ಮಾಡಲು ತರುತ್ತಿದ್ದ ಆರೋಪಿತ ವಾಸುದೇವ್ ಆತನ ಬಳಿ ಇದ್ದ ವಿವಿಧ 09 ಬಗೆಯ ನಿಷೇದಿತ ಇ – ಸಿಗರೇಟ್‌ಗಳನ್ನು ಹಾಗೂ ನಿಷೇದಿತ ಇ – ಸಿಗರೇಟ್‌ಗಳನ್ನು ಇಟ್ಟಿದ್ದ ಖಾಲಿ 2 SUKURA GRAPE ಪ್ಯಾಕೇಟ್‌ಗಳನ್ನು ವಶಪಡಿಸಿಕೊಂಡಿದ್ದು, ಆತನ ಹೇಳಿಕೆಯಂತೆ ವಿ.ಎಸ್. ಆಚಾರ್ಯ ರಸ್ತೆಯಲ್ಲಿರುವ ಯೂತ್ ಕಾರ್ನರ್ ಅಂಗಡಿಯಲ್ಲಿ 2ನೇ ಆಪಾದಿತ ಸುಬ್ರಹ್ಮಣ್ಯ ಎಂಬಾತನ ವಶದಲ್ಲಿದ್ದ ವಿವಿಧ ಬಗೆಯ 25 ನಿಷೇದಿತ ಇ – ಸಿಗರೇಟ್‌ಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಪೊಲೀಸರು ಸ್ವಾಧೀನಪಡಿಸಿಕೊಂಡ ಸ್ವತ್ತಿನ ಒಟ್ಟು ಮೌಲ್ಯ ರೂ. 42,100/- ರೂ ಆಗಿರುತ್ತದೆ ಎನ್ನಲಾಗಿದೆ .
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ:123 BNS, ಮತ್ತು 7, 8 Prohibition of Electronic Cigarettes Act ನಂತೆ ಪ್ರಕರಣ ದಾಖಲಾಗಿದೆ.