
ಪ್ರಯಾಗ ರಾಜ್: ದಿನಾಂಕ:10-02-2025(ಹಾಯ್ ಉಡುಪಿ ನ್ಯೂಸ್) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ಮಹಾ ಕುಂಭಮೇಳದಲ್ಲಿ ಭಾಗವಹಿಸಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಕ್ಷಯಾವತ ಹಾಗೂ ಬಡೆಹನುಮಾನ ಮಂದಿರಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರಾಷ್ಟ್ರಪತಿಗಳ ಜೊತೆಗಿದ್ದರು.
ರಾಜ್ಯಪಾಲೆ ಆನಂದಿಬೆನ್ ಪಾಟೇಲ್ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರಾಷ್ಟ್ರಪತಿಯವರು ಆಗಮಿಸಿದಾಗ ಎದುರುಗೊಂಡು ಪ್ರಯಾಗ್ ರಾಜ್ ಗೆ ಸ್ವಾಗತಿಸಿದರು.
