
ಪಡುಬಿದ್ರಿ: ದಿನಾಂಕ:08-02-2025(ಹಾಯ್ ಉಡುಪಿ ನ್ಯೂಸ್) ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಗುಲಾಂ ಅವರ ಮನೆಗೆ ಕಾರೊಂದರಲ್ಲಿ ಮಾರಕಾಸ್ತ್ರ ಗಳನ್ನು ಹಿಡಿದು ಬಂದ ಯುವಕರ ತಂಡವೊಂದು ಕೊಲೆ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ಗುಲಾಂ ಮೊಹಮ್ಮದ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಗುಲಾಂ ಮೊಹಮ್ಮದ್ ಹೆಜಮಾಡಿ ಎಂಬವರು ಜಿಯಾನ್ ಕನ್ಸ್ಟ್ರಕ್ಷನ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಾಮಾಜಿಕ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮೂಲ್ಕಿ ಕಾರ್ನಾಡು ನಿವಾಸಿ ಆರೋಪಿ ಮೊಹಮ್ಮದ್ ಇರ್ಫಾನ್ ಎಂಬವನು ಗುಲಾಂ ಮೊಹಮ್ಮದ್ ಅವರನ್ನು ಉದ್ದೇಶಿಸಿ ಮಾನಹಾನಿಯಾಗುವ ರೀತಿ ಪತ್ರ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ರವಾನಿಸಿದ್ದು, ಆ ಬಗ್ಗೆ ಗುಲಾಂ ಮೊಹಮ್ಮದ್ ಅವರು ಆರೋಪಿ ಮೊಹಮ್ಮದ್ ಇರ್ಪಾನ್ ನಲ್ಲಿ ವಿಚಾರಿಸಿದಾಗ ಮೊಹಮ್ಮದ್ ಇರ್ಫಾನ್ ನು ಗುಲಾಂ ಮೊಹಮ್ಮದ್ ರಿಗೆ ಅವಾಚ್ಯ ಶಬ್ದಗಳಿಂದ ಬೈದು ಮುಂದಕ್ಕೆ ತನ್ನ ವಿಚಾರಕ್ಕೆ ಬಂದರೆ ಮನೆಗೆ ನುಗ್ಗಿ ಕೊಂದು ಹಾಕುವುದಾಗಿ ಬೆದರಿಕೆ ಹಾಕಿದ್ದು, ಅಲ್ಲದೇ ಅದರ ನಂತರ ಅದೇ ವಿಚಾರದಲ್ಲಿ ದಿನಾಂಕ 04/02/2025 ರಂದು ಮದ್ಯಾಹ್ನ ಆರೋಪಿ ಮೊಹಮ್ಮದ್ ಇರ್ಪಾನ್ ನು ಇತರ 4-5 ಜನ ಆರೋಪಿಗಳೊಂದಿಗೆ ಸೇರಿಕೊಂಡು ಮಾರಕಾಯುಧಗಳನ್ನು ಹಿಡಿದುಕೊಂಡು ಕಾರಿನಲ್ಲಿ ಬಂದು ಗುಲಾಂ ಮೊಹಮ್ಮದ್ ರ ಮನೆಗೆ ಅಕ್ರಮ ಪ್ರವೇಶ ಮಾಡಿ ಹೊರಗೆ ಬಾರೋ ನಿನ್ನನ್ನು ಇವತ್ತೇ ಕೊಂದು ಹಾಕುತ್ತೇವೆ ಎಂದು ಹೇಳಿ ಹಲ್ಲೆ ಮಾಡಲು ಬಂದಾಗ ಗುಲಾಂ ಮೊಹಮ್ಮದ್ ರು ತಪ್ಪಿಸಿಕೊಂಡಿದ್ದು, ಅಷ್ಟರಲ್ಲಿ ಗುಲಾಂ ಮೊಹಮ್ಮದ್ ರ ಮನೆಯವರನ್ನು ಕಂಡ ಆರೋಪಿಗಳು ಕಾರಿನಲ್ಲಿ ಹೊರಟು ಹೋಗಿದ್ದಾರೆ ಎಂದು ಗುಲಾಂ ಮೊಹಮ್ಮದ್ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಕಲಂ: 189(3), 191(2), 191, 331, 352, 351 ಜೊತೆಗೆ 190 BNS ರಂತೆ ಪ್ರಕರಣ ದಾಖಲಾಗಿದೆ.