Spread the love
  • ಬ್ರಹ್ಮಾವರ: ದಿನಾಂಕ:  08.2.2025 (ಹಾಯ್ ಉಡುಪಿ ನ್ಯೂಸ್) ಪೇತ್ರಿ ಕಡೆಯಿಂದ ಹೇರೂರು ಕಡೆಗೆ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ ಟಿಪ್ಪರ್ ಲಾರಿಯನ್ನು ಬ್ರಹ್ಮಾವರ ಪೊಲೀಸ್‌ ಠಾಣೆಯ ಸಹಾಯಕ ಪೊಲೀಸ್‌ ಉಪನಿರೀಕ್ಷಕರಾದ ಶಾಂತರಾಜ್ ಅವರು ವಶಪಡಿಸಿಕೊಂಡಿದ್ದಾರೆ.
  • ಬ್ರಹ್ಮಾವರ ಪೊಲೀಸ್‌ ಠಾಣೆ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಶಾಂತರಾಜ್ ಅವರು ದಿನಾಂಕ: 06-02-2025 ರಂದು ಠಾಣೆಗೆ ಬರುತ್ತಿರುವಾಗ  ಬೆಳಿಗ್ಗೆ  ಹೇರಿಂಜೆ ಎಂಬಲ್ಲಿರುವ  ಬ್ರಹ್ಮಾವರ ಸ್ಪೋರ್ಟ್ಸ್‌ ಕ್ಲಬ್‌ ರಸ್ತೆಯಲ್ಲಿ ಪೇತ್ರಿ ಕಡೆಯಿಂದ ಹೇರೂರು ಕಡೆಗೆ KA-52-9030  ನೇ ನಂಬ್ರದ ಟಿಪ್ಪರ್‌ ಲಾರಿಯಲ್ಲಿ ಮರಳು ತುಂಬಿಕೊಂಡು ಹೋಗುತ್ತಿರುವುದನ್ನು ನೋಡಿ ಪೊಲೀಸರು ಲಾರಿಯನ್ನು ನಿಲ್ಲಿಸಿ ವಿಚಾರಿಸಿದಾಗ   ಆರೋಪಿ  ಶಾಹಿದ್‌ ಶೇಖ್‌ ಕಾರ್ಕಳ ಎಂಬವನ ಮಾಲಿಕತ್ವದ KA-52-9030  ನೇ ನಂಬ್ರದ ಟಿಪ್ಪರ್‌ ಲಾರಿಯಲ್ಲಿ ಇನ್ನೋರ್ವ ಆರೋಪಿ ಅಕ್ಷಯ್‌ ಎಂಬವನು ಮರಳನ್ನು ಸಾಗಿಸಲು ಯಾವುದೇ  ಪರವಾನಿಗೆಯನ್ನು ಹೊಂದದೇ ಅಂದಾಜು ರೂ. 15,000/- ಮೌಲ್ಯದ ಸುಮಾರು 3 ಟನ್‌ ನಷ್ಟು ಮರಳನ್ನು ಮಂಗಳೂರಿನ ಗುರುಪುರದಿಂದ ಲೋಡ್‌ ಮಾಡಿಕೊಂಡು ಬಂದಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿರುತ್ತದೆ,
  • ಈ  ಲಾರಿಯಲ್ಲಿ  ಆರೋಪಿಗಳಾದ ಚಾಲಕ , ಮಾಲಕ ಹಾಗೂ ಇತರರು ಸೇರಿಕೊಂಡು ಸಂಘಟಿತವಾಗಿ ಯಾವುದೇ ಪರವಾನಿಗೆಯನ್ನು ಹೊಂದದೇ ಮರಳನ್ನು ಕದ್ದು ಸಾಗಾಟ ಮಾಡಿ  ಅಪರಾಥ ಮಾಡಿರುವುದು ಮೇಲ್ನೋಟಕ್ಕೆ  ಕಂಡು ಬಂದಿರುವುದಾಗಿ ದೂರು ನೀಡಿದ್ದಾರೆ.
  • ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ  ಕಲಂ: 4(1A), 21(4) MMDR ACT & ಕಲಂ: 112, 303(2) BNS ನಂತೆ  ಪ್ರಕರಣ ದಾಖಲಾಗಿದೆ.

error: No Copying!