Spread the love

ಶಂಕರನಾರಾಯಣ: ದಿನಾಂಕ:05-02-2025(ಹಾಯ್ ಉಡುಪಿ ನ್ಯೂಸ್) ಗೋಳಿಯಂಗಡಿ ಇಂದ ಹೆಬ್ರಿ ಕಡೆಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಶಂಕರನಾರಾಯಣ ಪೊಲೀಸ್‌ ಠಾಣೆಯ ಪಿಎಸ್ಐ ಯವರಾದ ನಾಸೀರ್ ಹುಸೇನ್ ಅವರು ವಶಪಡಿಸಿಕೊಂಡಿದ್ದಾರೆ.

ಶಂಕರನಾರಾಯಣ ಪೊಲೀಸ್  ಠಾಣೆಯ ಪಿಎಸ್ಐ ಯವರಾದ ನಾಸಿರ್ ಹುಸೇನ್ ಅವರಿಗೆ ದಿನಾಂಕ:03-02-2025 ರಂದು ಅಲ್ಬಾಡಿ ಜಂಕ್ಷನ್ ಬಳಿ ಟಿಪ್ಪರ್ ಲಾರಿ ಮತ್ತು ಯಾವುದೋ ವಾಹನಕ್ಕೆ ಅಪಘಾತವಾಗಿರುವುದಾಗಿ ಮಾಹಿತಿ ಬಂದಿದ್ದು ಕೂಡಲೇ ಘಟನಾ ಸ್ಥಳಕ್ಕೆ ಹೋಗಿ ನೋಡಿದಾಗ ಸ್ಥಳದಲ್ಲಿ ಹಾಜರಿದ್ದ ಸಾರ್ವಜನಿಕರಲ್ಲಿ ಘಟನೆಯ ಬಗ್ಗೆ ಪೊಲೀಸರು ವಿಚಾರಿಸಿದಾಗ   ಗೋಳಿಯಂಗಡಿ ಕಡೆಯಿಂದ ಹೆಬ್ರಿ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಲಾರಿಗೆ, ಯಾವುದೋ ವಾಹನ ಡಿಕ್ಕಿ ಹೊಡೆದು ಹೋಗಿದ್ದು, ಟಿಪ್ಪರ್ ಲಾರಿಯನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದು, ಟಿಪ್ಪರ್ ಲಾರಿಯನ್ನು ನೋಡಿದಾಗ ಅದರ ನಂಬ್ರ KA20-AB-5525 ಆಗಿದ್ದು, ಅದರ ಚಾಲಕ ಉಮೇಶ ಎಂಬವರು ಆಗಿದ್ದು, ಪರಿಶೀಲಿಸಿದಾಗ ಟಿಪ್ಪರ್ ಲಾರಿಯಲ್ಲಿ ಸುಮಾರು 2 ½ ಯುನಿಟ್ ನಷ್ಟು ಮರಳು ಇರುವುದು ಕಂಡು ಬಂದಿದ್ದು, ಈ ಮರಳಿನ ಸಾಗಾಟದ ಬಗ್ಗೆ ದಾಖಲಾತಿಯನ್ನು ಕೇಳಿದಾಗ ಯಾವುದೇ ದಾಖಲಾತಿ ಇರುವುದಿಲ್ಲ, ಮರಳನ್ನು ರಟ್ಟಾಡಿ ರಕ್ತೇಶ್ವರ ದೇವಸ್ಥಾನ ಹತ್ತಿರ ಸಂಗ್ರಹಿಸಿದ್ದ ಮರಳನ್ನು ಚಾಲಕನ ಟಿಪ್ಪರ್ ಮಾಲೀಕರಾದ ಜಪ್ತಿಯ ಕೌಶಿಕ ರವರ ಸೂಚನೆಯಂತೆ ತುಂಬಿಸಿಕೊಂಡು ಅಲ್ಬಾಡಿ ಗ್ರಾಮದ ಗರಡಿ ದೇವಸ್ಥಾನದ ಬಳಿ ತೆಗೆದುಕೊಂಡು ಹೋಗುವಂತೆ ಕೌಶಿಕ ರವರ ಸೂಚನೆಯಂತೆ ಹೋಗುತ್ತಿರುವಾಗ ಟಿಪ್ಪರ್ ಲಾರಿಗೆ ಯಾವುದೋ ವಾಹನ ಡಿಕ್ಕಿ ಹೊಡೆದಿದೆ ಎಂದು ಚಾಲಕ ತಿಳಿಸಿದ್ದಾನೆ.

    ಟಿಪ್ಪರ್ ಲಾರಿ ನಂಬ್ರ KA20AB5525 ರ ಚಾಲಕ ಉಮೇಶನು ತನ್ನ ಮಾಲೀಕರಾದ ಜಪ್ತಿಯ ಕೌಶಿಕ ರವರ ಸೂಚನೆ ಯಂತೆ   ಟಿಪ್ಪರ್ ಲಾರಿಯಲ್ಲಿ ಚಾಲಕ ಉಮೇಶ ಹಾಗೂ ಕೌಶಿಕ ರವರುಗಳು ಒಬ್ಬರಿಗೊಬ್ಬರು ಮಾತನಾಡಿಕೊಂಡು ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಗುಂಪುಗೂಡಿ ಸಂಘಟಿತ ಅಪರಾದ ಮಾಡುವ ಉದ್ದೇಶದಿಂದ ಎಲ್ಲಿಂದಲೋ ಮರಳನ್ನು ಕಳವುಮಾಡಿ ಸರಕಾರಕ್ಕೆ ಯಾವುದೇ ರಾಜಧನವನ್ನು ಪಾವತಿ ಮಾಡದೇ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಿಯನ್ನು ಪಡೆದುಕೊಳ್ಳದೇ KA20AB5525 ನೇ ಟಿಪ್ಪರ್‌ ಲಾರಿಯಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡಿ ಅಪರಾಧ ಎಸಗಿರುತ್ತಾರೆ ಎಂದು ದೂರನ್ನು ನೀಡಿದ್ದಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಕಲಂ 303(2), 112, 3(5)  BNS & 4(1- A), 21(4) MMRD Act  ನಂತೆ  ಪ್ರಕರಣ ದಾಖಲಾಗಿದೆ.

error: No Copying!