Spread the love

ಕೊಲ್ಲೂರು: ದಿನಾಂಕ:04-02-2025 (ಹಾಯ್ ಉಡುಪಿ ನ್ಯೂಸ್) ಸಾಮಾಜಿಕ ಕಾರ್ಯಕರ್ತೆಯೋರ್ವರಿಗೆ ಓರ್ವ ಮಹಿಳೆ ಹಾಗೂ ಮತ್ತಿತರರು ಬೈದು,ಜೀವ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ

ಕುಂದಾಪುರ, ಹೊಸೂರು ಗ್ರಾಮದ ನಿವಾಸಿ ನಾಗರತ್ನ (36) ಎಂಬವರು ದಿನಾಂಕ 03/02/2025 ರಂದು ಅಗತ್ಯ ಕೆಲಸದ ಬಗ್ಗೆ ಮನೆಯಿಂದ ವಂಡ್ಸೆಗೆ ಹೋಗಲು ನಡೆದುಕೊಂಡು ಬರುವಾಗ, ಬೆಳಿಗ್ಗೆ  ಕುಂದಾಪುರ ತಾಲೂಕು ಹೊಸೂರು ಗ್ರಾಮದ ಮರ್ಡಿ ಹೆಂಚಿನಮನೆ ಎಂಬಲ್ಲಿಯ ಮಂಜುಳ ಎಂಬುವವರ ಮನೆಯ ಬಳಿ ಹೋಗುವ ಸಮಯ ಆಪಾದಿತರಾದ ಮಂಜುಳ ಹಾಗೂ ಚಂದ್ರ ಶೇಖರ ಎಂಬುವವರು ನಾಗರತ್ನ ರವರ ಬಳಿಗೆ ಬಂದು ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿ, ಆಪಾದಿತೆ ಮಂಜುಳಾ ಮತ್ತು ಚಂದ್ರಶೇಖರನು ನಾಗರತ್ನರವರಿಗೆ ಹಲ್ಲೆ ಮಾಡಿದ್ದು ಈ ಘಟನೆ ಸಮಯ ಸ್ಥಳದಲ್ಲಿದ್ದ ಆಪಾದಿತ ಸುಬ್ಬಣ್ಣ ಎಂಬವ ಪ್ರಚೋದನೆ ಮಾಡಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆಪಾದಿತ ಅಶೋಕ ಎಂಬಾತ ಪೋನ್‌ ಮಾಡಿ ಹೆದರಿಸಿದ್ದು, ಅಶೋಕ ಎಂಬಾತನ ಪ್ರಚೋದನೆಯಿಂದ ಆಪಾದಿತರುಗಳು ಈ ಕೃತ್ಯ ಏಸಗಿರುತ್ತಾರೆ ಎಂದು ನಾಗರತ್ನ ಅವರು ದೂರಿನಲ್ಲಿ ತಿಳಿಸಿದ್ದಾರೆ.

ನಾಗರತ್ನ ಅವರು ಸಾಮಾಜಿಕ ಕಾರ್ಯಕರ್ತೆಯಾಗಿದ್ದು ಹಲವಾರು ಅಕ್ರಮ ಭೂಕಬಳಿಕೆ ಪ್ರಕರಣಗಳನ್ನು ಬಯಲಿಗೆಳೆದು ಸರಕಾರದ ವಶಕ್ಕೆ ಒದಗಿಸಿದ್ದಾರೆ ಎನ್ನಲಾಗಿದೆ ಹಾಗೂ  ಮಂಜುಳಾ ಎಂಬವರ ಅಕ್ರಮ ಭೂಕಬಳಿಕೆ ಬಗ್ಗೆಯೂ ಸರ್ಕಾರಕ್ಕೆ ದೂರು ನೀಡಿದ್ದಾರೆ ಎಂದು ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.

ನಾಗರತ್ನ ರವರು ಈ ಘಟನೆಯಿಂದ ಗಾಯಗೊಂಡು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದು ಅವರು ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ  ಕಲಂ: 3 (1) , (r), (s), 3(2), (v-a) SCc/ST act 2015, 115 (2), 352, 351 (2), 54, 49, R/w 3 (5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!