
ಹಿರಿಯಡ್ಕ: ದಿನಾಂಕ: 31-01-2025(ಹಾಯ್ ಉಡುಪಿ ನ್ಯೂಸ್) ಗೇರುಬೀಜ ಮಾರಾಟ ವ್ಯವಹಾರದಲ್ಲಿ ಚಾಂತಾರು ಗ್ರಾಮದ ಮಾಸ್ ಕ್ಯಾಶ್ಯೂಸ್ ನವರು ಸುಮಾರು 3ಕೋಟಿ ರೂಪಾಯಿ ವಂಚನೆ ನಡೆಸಿದ್ದಾರೆ ಎಂದು ಚಂದ್ರಶೇಖರ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಪೆರ್ಡೂರು ಗ್ರಾಮದ ಚಂದ್ರಶೇಖರ ಎಂಬವರು ಸುಮಾರು 4 ವರ್ಷದಿಂದ ಉಡುಪಿ ತಾಲೂಕು ಪೆರ್ಡೂರು ಗ್ರಾಮದಲ್ಲಿ ಶಶಿ ಕ್ಯಾಶ್ಯೂಸ್ ಎಂಬ ಗೇರು ಬೀಜ ಸಂಸ್ಕರಣಾ ಕಾರ್ಖಾನೆಯನ್ನು ನಡೆಸಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
2023 ನೇ ಇಸವಿಯಿಂದ ಜಿ.ಬಾವಾಜಿ ಸಾಹೇಬ್ ರವರ ಮಾಲಕತ್ವದ ಬ್ರಹ್ಮಾವರ ತಾಲೂಕು ಚಾಂತಾರು ಎಂಬಲ್ಲಿರುವ ಮಾಸ್ ಕ್ಯಾಶ್ಯೂಸ್ ರವರೊಂದಿಗೆ ಗೇರು ಬೀಜ ಮಾರಾಟದ ವ್ಯವಹಾರ ಮಾಡಿಕೊಂಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಜಿ.ಬಾವಾಜಿ ಸಾಹೇಬ್ ರವರು ಚಂದ್ರಶೇಖರರವರಿಂದ ಖರೀದಿ ಮಾಡಿದ ಗೇರು ಬೀಜದ ಹಣವನ್ನು ಅವರ ಬ್ಯಾಂಕ್ ಖಾತೆಗೆ ಆಗಿಂದಾಗೆ ವರ್ಗಾವಣೆ ಮಾಡುತ್ತಿದ್ದರು ಅಥವಾ ಹಣವನ್ನು ಕೊಡಲು ಸಾಧ್ಯವಾಗದೇ ಇದ್ದಾಗ ಅದರ ಬದಲಾಗಿ ಅಷ್ಟೇ ಬೆಲೆಯ ಕಚ್ಚಾ ಗೇರು ಬೀಜಗಳನ್ನು ನೀಡುತ್ತಿದ್ದು ,ನಂತರದ ದಿನಗಳಲ್ಲಿ ಹಣ ಅಥವಾ ಕಚ್ಚಾ ಗೇರು ಬೀಜಗಳನ್ನು ವಾಪಾಸ್ಸು ಕೊಡಲು 4-5 ದಿನಗಳು ವಿಳಂಬ ಮಾಡಿದ್ದು ಚಂದ್ರಶೇಖರರವರಿಗೆ ಅವರ ಮೇಲೆ ನಂಬಿಕೆ ಇದ್ದ ಕಾರಣ ಹಣವನ್ನು ಸುಧಾರಿಸಿಕೊಂಡು ತೆಗೆದುಕೊಂಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದಿನಾಂಕ: 01/04/2024 ರಿಂದ 12/01/2025 ರವರೆಗೆ ಜಿ.ಬಾವಾಜಿ ಸಾಹೇಬ್ ರವರ ಮಾಲಕತ್ವದ ಮಾಸ್ ಕ್ಯಾಶ್ಯೂಸ್ ರವರೊಂದಿಗೆ ಚಂದ್ರಶೇಖರರವರು ಒಟ್ಟು 20,18,85,977,037/- (ಇಪ್ಪತ್ತು ಕೋಟಿ ಹದಿನೆಂಟು ಲಕ್ಷ ಎಂಬೈತೈದು ಸಾವಿರದ ಒಂಬೈನೂರ ಎಪ್ಪತ್ತೇಳು ರೂಪಾಯಿ) ಯಷ್ಟು ಮೊತ್ತದ ಗೇರು ಬೀಜವನ್ನು ಮಾರಾಟ ಮಾಡಿದ್ದು. ಮಾಸ್ ಕ್ಯಾಶ್ಯೂಸ್ ನ ಮಾಲಕರಾದ ಜಿ.ಬಾವಾಜಿ ಸಾಹೇಬ್ ರವರು ಪ್ರತಿ ತಿಂಗಳು ಹಣ ಅಥವಾ ಕಚ್ಚಾ ಗೇರು ಬೀಜದ ರೂಪದಲ್ಲಿ 17,33,57,656.50/- ( ಹದಿನೇಳು ಕೋಟಿ ಮೂವತ್ತು ಮೂರು ಲಕ್ಷ ಐವತ್ತೇಳು ಸಾವಿರದ ಆರು ನೂರ ಐವತ್ತಾರು ರೂಪಾಯಿ) ಯಷ್ಟು ಮೊತ್ತವನ್ನು ವಾಪಾಸ್ಸು ನೀಡಿರುತ್ತಾರೆ ಉಳಿದ ಬಾಕಿ 2,85,28,320.87/-( ಎರಡು ಕೋಟಿ ಎಂಬೈತ್ತೈದು ಲಕ್ಷದ ಇಪ್ಪತ್ತೆಂಟು ಸಾವಿರದ ಮೂರು ನೂರ ಇಪ್ಪತ್ತು ರೂಪಾಯಿ) ಯಷ್ಟು ಹಣವನ್ನು ಜಿ.ಬಾವಾಜಿ ಸಾಹೇಬ್ ರವರು ಚಂದ್ರಶೇಖರ ರವರಿಗೆ ವಾಪಾಸ್ಸು ನೀಡದೇ ನಂಬಿಕೆ ದ್ರೋಹ ಮಾಡಿ ವಂಚನೆ ಮಾಡಿದ್ದಾರೆ ಅಲ್ಲದೆ ಮೊಬೈಲ ನ್ನು ಸ್ವಿಚ್ಚ ಆಫ್ ಮಾಡಿ ಸುಮಾರು ದಿನಗಳಿಂದ ಆಫೀಸ್ ಗೆ ಬಾಗಿಲು ಹಾಕಿ ಹೋಗಿರುತ್ತಾರೆ ಎಂದು ಚಂದ್ರಶೇಖರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ U/S 316,318 ಬಿಎನ್‌ಎಸ್ ರಂತೆ ಪ್ರಕರಣ ದಾಖಲಾಗಿದೆ.