
ಉಡುಪಿ: ದಿನಾಂಕ:30-01-2025(ಹಾಯ್ ಉಡುಪಿ ನ್ಯೂಸ್) ಕಿನ್ನಿಮೂಲ್ಕಿಯ ಲಾಡ್ಜ್ ಒಂದರಲ್ಲಿ ಮಹಿಳೆ ಯೋರ್ವರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಕರೆದುಕೊಂಡು ಬಂದ ಪಿಂಪ್ ಕೇಶವ ಎಂಬವನು ಆಕೆಯನ್ನು ಲಾಡ್ಜ್ ನ ರೂಂ ಒಂದರಲ್ಲಿ ಕೂಡಿ ಹಾಕಿ ಬಲವಂತದಿಂದ ಅವಳಿಂದ ವೈಶ್ಯಾವಾಟಿಕೆ ನಡೆಸುತ್ತಿದ್ದ ಎಂಬ ಮಾಹಿತಿ ಮೇರೆಗೆ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ರಾಮಚಂದ್ರ ನಾಯಕ್ ಅವರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ.
ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ (ಪ್ರಭಾರ ಮಹಿಳಾ ಪೊಲೀಸ್ ಠಾಣೆ) ರಾಮಚಂದ್ರ ನಾಯಕ್ ಅವರಿಗೆ ದಿನಾಂಕ:29-01-2025 ರಂದು 76 ಬಡಗುಬೆಟ್ಟು ಗ್ರಾಮದ ಕಿನ್ನಿಮೂಲ್ಕಿಯಲ್ಲಿರುವ ಮೌರ್ಯ ಹೊಟೇಲ್‌ನ 2 ನೇ ಮಹಡಿಯಲ್ಲಿರುವ ರೂಂ ನಂಬ್ರ 207 ರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಬಂದ ಖಚಿತ ವರ್ತಮಾನದಂತೆ ಕೂಡಲೇ ಸಿಬ್ಬಂದಿಯವರೊಂದಿಗೆ ಮೌರ್ಯ ಹೊಟೇಲ್ ಗೆ ದಾಳಿ ನಡೆಸಿದ್ದಾರೆ ಹಾಗೂ ಅಲ್ಲಿ ಕೃತ್ಯಕ್ಕೆ ಸಂಬಂಧಿಸಿದ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ .
ಮೌರ್ಯ ಹೋಟೆಲ್ ನ ರೂಮ್ ನಂಬ್ರ 207 ರಲ್ಲಿ ಇದ್ದ ಒರ್ವ ಸಂತ್ರಸ್ಥೆಯನ್ನು ಪೊಲೀಸರು ರಕ್ಷಿಸಿದ್ದಾರೆ .ಕೇಶವ ಎಂಬ ಹೆಸರಿನ ವ್ಯಕ್ತಿ ಸಂತ್ರಸ್ಥೆಗೆ ಕೆಲಸ ಕೊಡುವುದಾಗಿ ಪುಸಲಾಯಿಸಿ ಶಿವಮೊಗ್ಗದಿಂದ ಉಡುಪಿಯ ಕಿನ್ನಿಮುಲ್ಕಿಯ ಮೌರ್ಯ ಹೊಟೇಲ್‌ಗೆ ಬರಮಾಡಿಕೊಂಡು ಆಕೆಯನ್ನು ಬಲವಂತವಾಗಿ ಅನೈತಿಕ ವೇಶ್ಯಾವಾಟಿಕೆ ಚಟುವಟಿಕೆ ಮಾಡುವಂತೆ ಒತ್ತಾಯ ಮಾಡಿ ಹೊಟೇಲ್‌ನ ರೂಮಿನಲ್ಲಿ ಇರಿಸಿರುತ್ತಾನೆ ಎಂದು ಸಂತ್ರಸ್ಥ ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ ಎಂದು ದೂರಲಾಗಿದೆ.
ಆರೋಪಿ ಜಗನ್ನಾಥ ಎಂಬವನು ಮೌರ್ಯ ಹೊಟೇಲ್ ಅನ್ನು ನಡೆಸಿಕೊಂಡಿದ್ದು ಆತ ಹೊಟೇಲ್ ನಲ್ಲಿ ರೂಮ್ ನೀಡಿ ವೇಶ್ಯಾ ವೃತ್ತಿಗೆ ಅನುವು ಮಾಡಿಕೊಟ್ಟಿದ್ದು, ಆರೋಪಿಗಳು ಅಕ್ರಮಮಾಗಿ ಸಾರ್ವಜನಿಕ ಸ್ಥಳದಲ್ಲಿ ವೇಶ್ಯವಾಟಿಕೆ ದಂಧೆ ನಡೆಸಿ ಅಕ್ರಮ ಲಾಭ ಪಡೆಯುವ ಉದ್ದೇಶದಿಂದ ಸಂತ್ರಸ್ಥೆಯನ್ನು ಹೊಟೇಲ್‌ನ ರೂಮ್‌ನಲ್ಲಿ ಇರಿಸಿಕೊಂಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ: 143(2) BNS ಮತ್ತು 3,4,5,6 ಮತ್ತು 7 Immoral Traffic ( Prevention) Act 1956 ರಂತೆ ಪ್ರಕರಣ ದಾಖಲಾಗಿದೆ.