
ಕಾಪು: ದಿನಾಂಕ: 01-02-2025(ಹಾಯ್ ಉಡುಪಿ ನ್ಯೂಸ್) ತಮಾಷೆಯ ಮಾತು ಬೆಳೆದು ತನಗೆ ಪರಿಚಯದವರೇ ಸೇರಿ ಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಉದ್ಯಾವರದ ವ್ಯಕ್ತಿ ಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.
ಉದ್ಯಾವರ ಗ್ರಾಮದ ನಿವಾಸಿ ಇಮಾಮ್ ಸಾಹೇಬ್ ಮುಲ್ಲಾ (40) ಎಂಬವರು ದಿನಾಂಕ: 28-01-2025ರಂದು ಸಂಜೆ ತನ್ನ ಪತ್ನಿ ಶೈನಾಜ್ ಬಾನು ರವರೊಂದಿಗೆ ತಮ್ಮ ಮಕ್ಕಳ ಸ್ಕಾಲರ್ ಶಿಪ್ ನ ಬಗ್ಗೆ ದಾಖಲಾತಿ ಪಡೆಯಲು ಉದ್ಯಾವರ ಗ್ರಾಮದ ಸೌಂದರ್ಯ ಬಿಲ್ಡಿಂಗ್ ನಲ್ಲಿರುವ ಸೇವಾಸಿಂಧು ಕೇಂದ್ರಕ್ಕೆ ಹೋಗಿದ್ಧರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಆ ಸಮಯ ಇಮಾಮ್ ಸಾಹೇಬ್ ಮುಲ್ಲಾರವರ ಪರಿಚಯದ ಜಾವೇದ್ ಹಾಗೂ ಸಿದ್ದು ಎಂಬವರು ಸೇವಾಸಿಂಧು ಕೇಂದ್ರಕ್ಕೆ ಬಂದಿದ್ದು ಇಮಾಮ್ ಸಾಹೇಬ್ ಮುಲ್ಲಾ ರವರೊಂದಿಗೆ ತಮಾಷೆ ಮಾಡುತ್ತ ಮಾತಿಗೆ ಮಾತು ಬೆಳೆದು ಅಂಗಡಿಯ ಹೊರಗಡೆ ಬಂದಾಗ ಜಾವೆದ್ ಹಾಗೂ ಸಿದ್ದು ರವರು ಇಮಾಮ್ ಸಾಹೇಬ್ ಮುಲ್ಲಾಗೆ ಕೈಯಿಂದ ಹೊಡೆದಿದ್ದು ನಂತರ ಇಮಾಮ್ ಸಾಹೇಬ್ ಮುಲ್ಲಾ ರವರು ಮನೆಯ ಕಡೆಗೆ ಬೋಳಾರಗುಡ್ಡೆ ಎಂಬಲ್ಲಿಗೆ ಸಂಜೆ ತಲುಪುವಾಗ ಜಾವೆದ್, ಸಿದ್ದು ಹಾಗೂ ಹೆಸರು ಗೊತ್ತಿಲ್ಲದ ಜಾವೇದ್ ನ ಸಂಬಂಧಿಕರು ಒಂದು ಮೋಟಾರ್ ಸೈಕಲ್ ನಲ್ಲಿ ಬಂದು ಇಮಾಮ್ ಸಾಹೇಬ್ ಮುಲ್ಲಾ ರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈಯುತ್ತ ಮೂರು ಜನರೂ ಸೇರಿ ಇಮಾಮ್ ಸಾಹೇಬ್ ತಲೆಗೆ, ಮುಖಕ್ಕೆ, ಕೆನ್ನೆಗೆ ಹೊಡೆದು ನೆಲಕ್ಕೆ ದೂಡಿ ಹಾಕಿ ಕಾಲುಗಳಿಂದ ತುಳಿದು ನಂತರ ಮೂರು ಜನ ಒಂದು ಮೋಟಾರ್ ಸೈಕಲ್ ನಲ್ಲಿ ಹೋಗಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇಮಾಮ್ ಸಾಹೇಬ್ ಮುಲ್ಲಾ ರನ್ನು ಅವರ ಪತ್ನಿ ಉಪಚರಿಸಿ ಮನೆಗೆ ಕರೆದುಕೊಂಡು ಹೋಗಿದ್ದು, ನಂತರ ಇಮಾಮ್ ಸಾಹೇಬ್ ಮುಲ್ಲಾ ರು ತನಗೆ ಹಲ್ಲೆ ನಡೆಸಿದ ಉದ್ಯಾವರದ ಸಂಪಿಗೆ ನಗರದಲ್ಲಿರುವ ಜಾವೇದ್ ಮನೆಯಲ್ಲಿ ತಿಳಿಸಲು ಸಂಜೆ ಜಾವೇದ್ ನ ಮನೆಗೆ ಹೋಗಿದ್ದು ಆ ಸಮಯ ಜಾವೇದ್, ಸಲೀಂ ಹಾಗೂ ಜಾವೇದ್ ನ ಸಂಬಂಧಿಕರು ಮೂರು ಜನ ಹೆಂಗಸರು ಇಮಾಮ್ ಸಾಹೇಬ್ ಮುಲ್ಲಾ ರಿಗೆ ಕೈಯಿಂದ ಹೊಡೆದಿದ್ದು ನಂತರ ಇಮಾಮ್ ಸಾಹೇಬ್ ಮುಲ್ಲಾ ರು ಚಿಕಿತ್ಸೆಯ ಬಗ್ಗೆ ಒಂದು ಆಟೋರಿಕ್ಷಾದಲ್ಲಿ ತೆರಳಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ..
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಕಲಂ: 126(2), 115(2), 352 R/w 190 BNS ರಂತೆ ಪ್ರಕರಣ ದಾಖಲಾಗಿದೆ.