Spread the love

ಹಿರಿಯಡ್ಕ: ದಿನಾಂಕ:28-01-2025( ಹಾಯ್ ಉಡುಪಿ ನ್ಯೂಸ್) ವೀರಭದ್ರ ಗೋಶಾಲೆ ಯಿಂದ ತಡರಾತ್ರಿ ಯಾರೋ ದನ ಕಳ್ಳರು 2 ದನಗಳನ್ನು ಕಳ್ಳತನ ನಡೆಸಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದಿನಾಂಕ 27/01/2025 ರಂದು ರಾತ್ರಿಯಲ್ಲಿ ಯಾರೋ ಕಳ್ಳರು ಬೊಮ್ಮರಬೆಟ್ಟು ಗ್ರಾಮದ ಶ್ರೀ ವೀರಭದ್ರ ದೇವಸ್ಥಾನದ ಮುಂಭಾಗದ ಬಾಕಿಮಾರು ಗದ್ದೆಯಲ್ಲಿರುವ ಶ್ರೀ ವೀರಭದ್ರ ಗೋಶಾಲೆಯ ಮುಂಭಾಗದ ಬಾಗಿಲಿನ ಬೀಗವನ್ನು ಕತ್ತರಿಸಿ ಒಳ ಹೊಕ್ಕು ಗೋಶಾಲೆಯಲ್ಲಿ ಕಟ್ಟಿ ಹಾಕಲಾಗಿದ್ದ ಕಪ್ಪು ಬಣ್ಣದ ದನ ಹಾಗೂ ಕಪ್ಪು ಬಣ್ಣದ ಗಂಡು ಕರುವಿನ ಹಗ್ಗವನ್ನು ಬಿಚ್ಚಿ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು  ಕುದಿ ಗ್ರಾಮದ ನಿವಾಸಿ ಸತ್ಯನಾರಾಯಣ (58) ಎಂಬವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕಲಂ: 303(2) BNS,‌ ಕಲಂ: 4, 5, 7, 12 ಕರ್ನಾಟಕ ಜಾನುವಾರು ಪ್ರತಿಬಂಧಕ ಕಾಯ್ದೆ ಮತ್ತು ಕಲಂ 11(1)(ಡಿ) ರಂತೆ ಪ್ರಕರಣ ದಾಖಲಾಗಿದೆ.

error: No Copying!