Spread the love

ಮಲ್ಪೆ: ದಿನಾಂಕ:27-01-2025(ಹಾಯ್ ಉಡುಪಿ ನ್ಯೂಸ್) ತನ್ನ ಮೇಲೆ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಸಿಟ್ಟಿನಿಂದ ವ್ಯಕ್ತಿ ಯೋರ್ವ ದೂರು ನೀಡಿದವರ ಮನೆಗೆ ನುಗ್ಗಿ ಹಾನಿ ನಡೆಸಿದ್ದಾನೆ ಎಂದು ಶೇಖರ ಎಂಬವರು ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

  ದಿನಾಂಕ 16/01/2025 ರಂದು ರಾತ್ರಿ ಮಲ್ಪೆ ಬೀಚ್‌ ಬಳಿ ಅವತಾರ ಸೀ ವಿಲ್ಲಾದ ಎದುರು ಸಾಗರ್‌ , ಯಶವಂತ, ಚರಣ್‌, ಕಿಶೋರ್, ರಾಜ ಮತ್ತು ಇತರ ಇಬ್ಬರು ಸೇರಿ ಕೊಡವೂರು ಗ್ರಾಮದ ನಿವಾಸಿ ಶೇಖರ (59) ಮತ್ತು ಅವರ ಹೆಂಡತಿಗೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಬಗ್ಗೆ ಶೇಖರ್ ಅವರು  ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣೃ ದಾಖಲಾಗಿದೆ ಎನ್ನಲಾಗಿದೆ.

ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗೆ ಇರುವ ಸಾಗರ್‌ ಎಂಬವನು ಚರಣ್‌ ಮತ್ತು ವಿನೀತ್‌ ಎಂಬವರೊಂದಿಗೆ ಬಂದು,  ಶೇಖರರವರು ಆತನ ಮೇಲೆ ದೂರು ನೀಡಿರುವುದಕ್ಕೆ ದ್ವೇಷಗೊಂಡು, ಶೇಖರರವರನ್ನು ಕೊಲ್ಲುವ ಉದ್ದೇಶದಿಂದಲೋ ಅಥವಾ ಬೆದರಿಕೆಯನ್ನು ಒಡ್ಡುವ ಉದ್ದೇಶದಿಂದಲೋ  ಶೇಖರರವರ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿ, ವಿಲ್ಲಾಗೆ ಅಳವಡಿಸಿದ ನೀರಿನ ಟ್ಯಾಪ್‌ ನ್ನು ಮುರಿದು ರೂಪಾಯಿ 5,000/- ನಷ್ಟವನ್ನುಂಟು ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಶೇಖರರವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ  ಕಲಂ: 329(3),324(4) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!