
ಬ್ರಹ್ಮಾವರ: ದಿನಾಂಕ:25-01-2025(ಹಾಯ್ ಉಡುಪಿ ನ್ಯೂಸ್) ಉಪ್ಪೂರು ಗ್ರಾಮದಲ್ಲಿ ಖಾಸಗಿ ಜಮೀನಿನಲ್ಲಿ ಸರ್ವೇ ಕಾರ್ಯ ನಡೆಸುತ್ತಿದ್ದಾಗ ಹತ್ತಿರದ ಜಾಗದ ವ್ಯಕ್ತಿ ಮತ್ತು ಇತರರು ಸರ್ವೇ ಕಾರ್ಯ ನಡೆಸದಂತೆ ಬೆದರಿಕೆ ಹಾಕಿದ್ದಾರೆ ಎಂದು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಿದಿಯೂರು ಗ್ರಾಮದ ನಿವಾಸಿ ಪ್ರಸಾದ್ ಕಿದಿಯೂರು (46) ಎಂಬವರು ಡಾ. ಸುಮನ ಎಂಬವರ ಬ್ರಹ್ಮಾವರ ತಾಲೂಕು ಉಪ್ಪೂರು ಗ್ರಾಮದ ಸರ್ವೆನಂಬ್ರ 262/1 ರಲ್ಲಿ 12 ಎಕರೆ 77 ಸೆಂಟ್ಸ್, ಸರ್ವೆನಂಬ್ರ 263 ರಲ್ಲಿ 23 ಎಕರೆ 41 ಸೆಂಟ್ಸ್, ಮತ್ತು ಸರ್ವೆನಂಬ್ರ 297 ರಲ್ಲಿ 12 ಎಕರೆ 90 ಸೆಂಟ್ಸ್ ಜಮೀನಿನ ಅಧಿಕಾರಪತ್ರ (GPA) ಹೊಂದಿದವರಾಗಿದ್ದು, ಅವರು ದಿನಾಂಕ: 24.01.2025 ರಂದು ಸರ್ವೆ ಅಧಿಕಾರಿಗಳೊಂದಿಗೆ ಈ ಜಮೀನಿನ ಸರ್ವೆಕಾರ್ಯಮಾಡುತ್ತಿರುವ ಸಮಯ, ಜಮೀನಿನ ಸರ್ವೆನಂಬ್ರ 297 ರಲ್ಲಿ ರತ್ನಾಕರ ಎಂಬುವವರು ಸುಮಾರು 1 ಎಕರೆ 50 ಸೆಂಟ್ಸ್ ಎಕರೆ ಜಾಗವನ್ನು ಒತ್ತುವರಿ ಮಾಡಿ, ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ ತಂತಿಬೇಲಿ ಅಳವಡಿಸಿ, ಆ ಬೇಲಿಗೆ ವಿದ್ಯುತ್ ಹರಿಸಿರುವುದು ಕಂಡು ಬಂದಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸಂಜೆಯ ವೇಳೆಗೆ ರತ್ನಾಕರ ಎಂಬುವವರು ಅವರ ಜೊತೆಗೆ ಇತರ 05 ಜನರನ್ನು ಕರೆದುಕೊಂಡು ಬಂದು ಸರ್ವೆ ಕಾರ್ಯಕ್ಕೆ ಅಡ್ಡಿಪಡಿಸಿ, ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 126(2), 329(3), 351(2), R/W 190 BNS ಯಂತೆ ಪ್ರಕರಣ ದಾಖಲಾಗಿದೆ.