
ಮಲ್ಪೆ: ದಿನಾಂಕ:25-01-2025(ಹಾಯ್ ಉಡುಪಿ ನ್ಯೂಸ್) ಮೊಬೈಲ್ ಕಂಪನಿಯವರು ಅಳವಡಿಸಿದ್ದ ಮೊಬೈಲ್ ಟವರನ್ನು ಯಾರೋ ಕಳ್ಳತನ ನಡೆಸಿದ್ದಾರೆ ಎಂದು ಕಂಪೆನಿಯ ಅಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ.
ಸಂದೀಪ್ ಎಂಬವರು ಜಿಟಿಎಲ್ ಇನ್ಫ್ರಾಸ್ಠ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಕ್ವೀನ್ಸ್ ರೋಡ್ ,ಬೆಂಗಳೂರು GTL ಕಂಪನಿಯ ಅಧಿಕೃತ ಅಧಿಕಾರಿಯೆಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿಕೊಂಡಿದ್ದಾರೆ.
GTL ಮೊಬೈಲ್ ಕಂಪನಿಗೆ ಸೇರಿದ ಮೊಬೈಲ್ ಟವರನ್ನು ಉಡುಪಿ ತಾಲೂಕು ಬ್ರಹ್ಮಾವರ ಹೋಬಳಿ ಕಲ್ಯಾಣಪುರ ಸರ್ವೆ ನಂ:232/2B2/-P2 ರಲ್ಲಿ ಟವರನ್ನು ಅಳವಡಿಸಲಾಗಿದೆ ಎಂದು ಹೇಳಿದ್ದಾರೆ, ದಿನಾಂಕ:31/03/2023 ರಂದು ಕಂಪನಿಯ ಟವರಿನ ಮೇಲ್ವಿಚಾರಣೆ ನೋಡುತ್ತಿದ್ದ ಟೆಕ್ನಿಷಿಯನ್ ರವರು ಪರಿಶೀಲನೆ ಮಾಡಿದಾಗ ಸದ್ರಿ ಟವರ್ ನಿರ್ಮಿಸಿದ ಸ್ಥಳದಲ್ಲಿ ಕಾಣದೆ ಇದ್ದು ಈ ಬಗ್ಗೆ ಕಂಪನಿಗೆ ಮಾಹಿತಿ ನೀಡಿದ್ದು ಪರಿಶೀಲಿಸಿದಾಗ ಯಾರೋ ಕಳ್ಳರು ಮೊಬೈಲ್ ಟವರನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸ್ವೋತ್ತಿನ ಮೌಲ್ಯರೂ 36,92,992/- ಆಗಿರುತ್ತದೆ ಎನ್ನಲಾಗಿದೆ.
ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಕಲಂ: 378,379 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.