Spread the love

ಉಡುಪಿ: ದಿನಾಂಕ:22-01-2025(ಹಾಯ್ ಉಡುಪಿ ನ್ಯೂಸ್) ಯುಕೆ ಯಲ್ಲಿ ವೈದ್ಯಕೀಯ ವಿಧ್ಯಾಭ್ಯಾಸ ವನ್ನು ಮುಂದುವರಿಸಲು ಸೀಟು ದೊರಕಿಸಿ ಕೊಡುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದ ಮೂವರು ಖದೀಮರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.

ದಿನಾಂಕ:09-01-2025 ರಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಸಂತೋಷ ಎ ಎಂಬವರು ದೂರು ನೀಡಿದ್ದರು.

ಸಂತೋಷ ಎ ಅವರು ಡಾಕ್ಟರ್ ವಿಧ್ಯಾಭ್ಯಾಸವನ್ನು ಮುಗಿಸಿ ಕೊಂಡಿದ್ದು ಹೆಚ್ಚಿನ M.P.H ವಿಧ್ಯಾಭ್ಯಾಸವನ್ನು ಯುಕೆ ಯಲ್ಲಿ ಮುಂದುವರಿಸಲು ದುಬೈಗೆ ತೆರಳಿ ಅಫ್ತಾಬ್ ಎಂಬವರನ್ನು ಭೇಟಿ ಮಾಡಿದ್ದು ಆತ ಯುಕೆ ಯಲ್ಲಿ M.PH ವಿಧ್ಯಾಭ್ಯಾಸಕ್ಕಾಗಿ ಸೀಟನ್ನು ಖಾಯಂ ಮಾಡಲು ಮೊದಲಿಗೆ 8.5 ಲಕ್ಷ ವನ್ನು ನೀಡುವಂತೆ ಕೇಳಿದ್ದು ಸಂತೋಷ ಎ ಅವರು NRA ಖಾತೆ ಯನ್ನು ಹೊಂದಿರದ ಕಾರಣ ಹಣವನ್ನು ಜಮಾ ಮಾಡಲು ಅಫ್ತಾಬ್ ನು ಆತನಿಗೆ ಪರಿಚಯವಿರುವ ಇನ್ನೊಬ್ಬ ಆರೋಪಿ ಸುಮನ್ ಎಸ್ ಎಂಬುವವರನ್ನು ಭೇಟಿ ಆಗುವಂತೆ ತಿಳಿಸಿದ್ದು ಅದರಂತೆ ಸಂತೋಷ ಎ ಅವರು ಉಡುಪಿಗೆ ಆಗಮಿಸಿ ಸುಮನ್ ಎಸ್ ರವರನ್ನು ಉಡುಪಿ ಮೂಡನಿಡಂಬೂರು ಗ್ರಾಮದ ಎಂಟಿಆರ್ ಹೋಟೆಲ್ ನ ಹತ್ತಿರ ಭೇಟಿಯಾಗಿದ್ದರು ಎಂದಿದ್ದಾರೆ.

ನಂತರ ಆರೋಪಿ ಗಳನ್ನು ನಂಬಿ ಸಂತೋಷ ಎ ಅವರು ರೂಪಾಯಿ 8.5 ಲಕ್ಷ ಹಣವನ್ನು ವರ್ಗಾವಣೆ ಮಾಡಿದ್ದು ನಂತರ ಆರೋಪಿಗಳು ಸಂತೋಷ ಎ ಅವರ ಫೋನ್ ಕರೆಯನ್ನು ಸ್ವೀಕರಿಸದೆ ಇದ್ದು ಸಂತೋಷ ಎ ಅವರನ್ನು ನಂಬಿಸಿ ಮೋಸ ಮಾಡಿದ್ದರು.ಈ ಬಗ್ಗೆ ಸಂತೋಷ ಎ ಅವರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಈ ಪ್ರಕರಣದ ಆರೋಪಿಗಳ ಪತ್ತೆಗೆ ನಗರ ಠಾಣೆಯ ಪೊಲೀಸರು ವಿಶೇಷ ತಂಡವನ್ನು ರಚಿಸಿ ಆರೋಪಿಗಳಾದ ಸುಮನ್ ಎಸ್ (24) ಹೊಸನಗರ, ಶಿವಮೊಗ್ಗ, ಸುಹಾನ್ ಖಾನ್ (22) , ಬೆಳುವಾಯಿ, ಮೂಡಬಿದ್ರಿ, ಮೊಹಮ್ಮದ್ ಮಹಾಝ್ (23) ಮೂಡಬಿದ್ರಿ ಎಂಬವರನ್ನು  ಬಂಧಿಸಿದ್ದಾರೆ.ಅವರಿಂದ 5 ಲಕ್ಷ ರೂಪಾಯಿ ನಗದು, ಇನ್ನೋವಾ ಕಾರು ಮತ್ತು 2 ಮೊಬೈಲ್ ಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.

ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 9,56,000 ರೂಪಾಯಿಗಳಾಗಿದ್ದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ನಿರೀಕ್ಷಕರಾದ ರಾಮಚಂದ್ರ ನಾಯಕ್ ರವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಠಾಣೆಯ ಪಿಎಸ್ಐ ಈರಣ್ಣ ಶಿರಗುಂಪಿ, ಪಿಎಸ್ಐ ಪುನಿತ್ ಕುಮಾರ್, ಪಿಎಸ್ಐ ಭರತೇಶ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು .

error: No Copying!