
ಉಡುಪಿ: ದಿನಾಂಕ:21-01-2025(ಹಾಯ್ ಉಡುಪಿ ನ್ಯೂಸ್) ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ವ್ಯಕ್ತಿ ಯೋರ್ವರಿಗೆ 21.5 ಲಕ್ಷ ರೂಪಾಯಿ ವಂಚನೆ ನಡೆಸಿದ್ದಾರೆ ಎಂದು ದೂರು ನೀಡಿದ್ದಾರೆ.
ಬಾಪ್ಟಿಸ್ ಮೌರಿಸ್ ಲೋಬೋ ಎಂಬವರ ಮೊಬೈಲ್ ನಂಬ್ರವನ್ನು ಯಾರೋ ಅಪರಿಚಿತರು “Aarayaa hss “ ಎಂಬ ವಾಟ್ಸಪ್ ಗ್ರೂಫ್‌ಗೆ ಸೇರ್ಪಡೆ ಮಾಡಿದ್ದು, ಈ ಗ್ರೂಪ್‌ನಲ್ಲಿ ನೀವು ಷೇರು ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಮಾಹಿತಿ ತಿಳಿಸಿ ಬಾಪ್ಟಿಸ್ ಮೌರಿಸ್ ಲೋಬೋ ರವರನ್ನು ನಂಬಿಸಿ, ಆಸೆ ತೋರಿಸಿ, ಹಣವನ್ನು ಹೂಡಿಕೆ ಮಾಡಲು ತಿಳಿಸಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನು ನಂಬಿದ ಬಾಪ್ಟಿಸ್ ಮೌರಿಸ್ ಲೋಬೋ ರವರು ಅವರ ಮತ್ತು ಅವರ ತಾಯಿಯ ಬ್ಯಾಂಕ್‌ಗಳ ಖಾತೆಯಿಂದ ದಿನಾಂಕ 02/12/2024 ರಿಂದ ದಿನಾಂಕ 06/01/2025 ರವರೆಗೆ ಅಪರಿಚಿತರು ಸೂಚಿಸಿದ ವಿವಿಧ ಖಾತೆಗಳಿಗೆ ಒಟ್ಟು 21,39,903/- ಹಣವನ್ನು ಹೂಡಿಕೆ ಮಾಡಿದ್ದು ತದನಂತರ ಬಾಪ್ಟಿಸ್ ಮೌರಿಸ್ ಲೋಬೋ ರವರು ಹೂಡಿಕೆ ಮಾಡಿದ ಹಣವನ್ನಾಗಲಿ ಅಥವಾ ಲಾಭಾಂಶವನ್ನಾಗಲಿ ನೀಡದೇ ನಂಬಿಸಿ, ಮೋಸದಿಂದ ನಷ್ಟ ಉಂಟು ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.
ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ: 66(ಸಿ), 66(ಡಿ) ಐ.ಟಿ. ಆಕ್ಟ್. , 318(4) BNS ರಂತೆ ಪ್ರಕರಣ ದಾಖಲಾಗಿದೆ.