
ಬ್ರಹ್ಮಾವರ: ದಿನಾಂಕ:21-01-2025 (ಹಾಯ್ ಉಡುಪಿ ನ್ಯೂಸ್) KYC ಅಪ್ಡೇಟ್ ಮಾಡಲು ಓಟಿಪಿ ಬೇಕೆಂದು ನಂಬಿಸಿ ಮಹಿಳೆಯೋರ್ವರಿಗೆ ವಂಚನೆ ನಡೆಸಿರುವ ಬಗ್ಗೆ ತಡವಾಗಿ ದೂರು ದಾಖಲಾಗಿದೆ.
ವಾರಂಬಳ್ಳಿ ಗ್ರಾಮದ ಉಪ್ಪಿನಕೋಟೆ ನಿವಾಸಿ ಶೋಭಾ (47) ಎಂಬವರು OSCES ಬ್ರಾಂಚ್ ಕೆನರಾ ಬ್ಯಾಂಕ್ ಬ್ರಹ್ಮಾವರದಲ್ಲಿ ಉಳಿತಾಯ ಖಾತೆ ಹೊಂದಿದ್ದು, ದಿನಾಂಕ: 25/10/2024 ರಂದು ಮಧ್ಯಾಹ್ನ ಯಾರೋ ಅಪರಿಚಿತರು ಕರೆ ಮಾಡಿ ಕೆನರಾ ಬ್ಯಾಂಕ್ ಹೆಡ್ ಆಫೀಸಿನಿಂದ ಕರೆ ಮಾಡಿರುವುದಾಗಿ ತಿಳಿಸಿ, ಶೋಭಾ ರವರ ಖಾತೆಯ KYC block ಆಗಿದ್ದು update ಮಾಡಲು OTP ಹೇಳುವಂತೆ ತಿಳಿಸಿ, ಶೋಭಾರವರ ಖಾತೆಯ ಡಿಟೈಲ್ ಹಾಗೂ OTP ತೆಗೆದುಕೊಂಡು ಶೋಭಾರವರ ಖಾತೆಯಿಂದ ರೂ 16,444/- ಹಣವನ್ನು ಆರೋಪಿಗಳ ಕೆನರಾ ಬ್ಯಾಂಕ್ ಖಾತೆಗೆ ಮೋಸದಿಂದ ವರ್ಗಾವಣೆ ಮಾಡಿಕೊಂಡಿರುತ್ತಾರೆ ಎಂದು ದೂರು ನೀಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ U/S 66 (C), 66 (D) IT ACT ರಂತೆ ಪ್ರಕರಣ ದಾಖಲಾಗಿದೆ.