Spread the love

ಉಡುಪಿ: ದಿನಾಂಕ :12-01-2025(ಹಾಯ್ ಉಡುಪಿ ನ್ಯೂಸ್)  ವ್ಯವಹಾರದಲ್ಲಿ ಪಾಲುದಾರರನ್ನಾಗಿ ಮಾಡುವುದಾಗಿ ನಂಬಿಸಿ ಪರಿಚಯಸ್ಥರೇ ಹಣ ಪಡೆದು ಕೊಂಡು ಎರಡು ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ದಾವೂದ್‌ ಹಕೀಂ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಕಾರ್ಕಳ ,ಎಣ್ಣೆಹೊಳೆ,ಮರ್ಣೆಗ್ರಾಮದ ನಿವಾಸಿ ದಾವುದ್ ಹಕೀಂ ಎಂಬವರು ಸುಮಾರು 15 ವರ್ಷಗಳಿಂದ ಕಾರ್ಕಳ ಮಾರ್ಕೇಟ್‌ ರಸ್ತೆಯಲ್ಲಿರುವ ಮಹಾಲಕ್ಷ್ಮೀ ಪ್ರಭಾ ಕಾಂಪ್ಲೇಕ್ಸ್‌ ನಲ್ಲಿ ಸೇಲ್ ಜೋನ್‌ ಎಂಬ ಹೆಸರಿನ ಮೊಬೈಲ್‌ ಸೇಲ್ಸ್‌ ಮತ್ತು ಸರ್ವೀಸ್‌ ಉದ್ಯಮ ನಡೆಸಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿ ಕೊಂಡಿದ್ದಾರೆ.

ದಾವುದ್ ಹಕೀಂ ರವರಿಗೆ ಆರೋಪಿಗಳಾದ ಅಬ್ದುಲ್‌ ರಹಿಮಾನ್‌, ಹಫೀಜ್‌ ಟಿ.ಎ , ಅಯ್ಯೂಬ್‌, ಸದಕತ್ತುಲ್ಲಾ, ಮೊಹಮ್ಮದ್‌ ಎಂಬವರ ಪರಿಚಯ ಸುಮಾರು 20 ವರ್ಷಗಳಿಂದ ಇದ್ದು ಆರೋಪಿಗಳು ದಾವುದ್ ಹಕೀಂ ರವರನ್ನು ವ್ಯವಹಾರದಲ್ಲಿ ಪಾಲುದಾರರನ್ನಾಗಿ ಮಾಡುವ ಭರವಸೆ ನೀಡಿ ಜಾಗ ಖರೀದಿ ಮಾಡಿ ಮಾರಾಟ ಮಾಡಿದಲ್ಲಿ ಹೆಚ್ಚಿನ ಲಾಭ ಸಿಗುತ್ತದೆ ಎಂಬುದಾಗಿ, ಟ್ರಾವ್ಯೆಲ್ಸ್‌ ಉದ್ಯಮ ನಡೆಸಿದಲ್ಲಿ ಲಾಭ ಸಿಗುತ್ತದೆ ಎಂಬುದಾಗಿ ದಾವುದ್ ಹಕೀಂ ರವರನ್ನು ನಂಭಿಸಿ ದಾವುದ್ ಹಕೀಂ ರವರಿಂದ ಹಣ, ಚಿನ್ನ ,ವಾಹನ ಪಡೆದುಕೊಂಡು ದಾವುದ್ ಹಕೀಂ ರವರಿಗೆ ಬರಬೇಕಾದ ಯಾವುದೇ ಲಾಭಾಂಶ ಹಣವನ್ನು ನೀಡದೇ ದಾವುದ್ ಹಕೀಂ ರಿಂದ ಪಡೆದುಕೊಂಡ ಚಿನ್ನ, ಹಣ, ವಾಹನ ರೂಪದಲ್ಲಿ ಪಡೆದುಕೊಂಡ ನಗದನ್ನು ವಾಪಾಸ್ಸು ನೀಡದೇ ದಾವುದ್ ಹಕೀಂ ರವರಿಗೆ ಹಾಗೂ ಅವರ ಕುಟುಂಬದವರಿಗೆ ಸುಮಾರು ರೂ 2,00,00,000/- ಯಷ್ಟು ನಷ್ಟ ಉಂಟುಮಾಡಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಸೆನ್‌ ಪೊಲೀಸ್ ಠಾಣೆಯಲ್ಲಿ  ಕಲಂ: 316(2),318(4), 351,352 r/w 190 Of BNS ರಂತೆ ಪ್ರಕರಣ ದಾಖಲಾಗಿದೆ.

error: No Copying!