Spread the love

ಉಡುಪಿ: ದಿನಾಂಕ:11-01-2025 (ಹಾಯ್ ಉಡುಪಿ ನ್ಯೂಸ್)

ರಸ್ತೆ ಸುರಕ್ಷತಾ ಸಪ್ತಾಹ 2025 ಕಾರ್ಯಕ್ರಮಕ್ಕೆ ಇಂದು ಬೆಳಿಗ್ಗೆ ಸಂತೆಕಟ್ಟೆಯಲ್ಲಿ  ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಚಾಲನೆಯನ್ನು ನೀಡಿದರು.

ದಿನಾಂಕ: 11-01-25 ರಿಂದ 17-01-25 ರ ವರೆಗೆ ದಿನದ 24 ಗಂಟೆಯೂ ವಾಹನ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ರಸ್ತೆ ಸುರಕ್ಷತಾ ಸಪ್ತಾಹದ ಬಗ್ಗೆ ಪೊಲೀಸ್ ಇಲಾಖೆಯಿಂದ ಮಾಹಿತಿ ನೀಡಲಾಗುವುದು. ಈ ಕಾರ್ಯಕ್ರಮಕ್ಕೆ ರೋಟರಿ ಕ್ಲಬ್ ಮಣಿಪಾಲ ಮತ್ತು ಲಯನ್ಸ್ ಕ್ಲಬ್ ಉಡುಪಿ ರವರು ಸಹಕಾರ ನೀಡಿದ್ದಾರೆ.

error: No Copying!