Spread the love

ಗಂಗೊಳ್ಳಿ: ದಿನಾಂಕ:05-01-2025(ಹಾಯ್ ಉಡುಪಿ ನ್ಯೂಸ್)  ಆಲೂರು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಕೆಲವರು ನಡೆಸುತ್ತಿದ್ದ ಕೋಳಿ ಅಂಕ ಜುಗಾರಿ ಅಡ್ಡೆಗೆ ಗಂಗೊಳ್ಳಿ ಪೊಲೀಸ್‌ ಠಾಣೆಯ ಪಿಎಸ್ಐ ಯವರಾದ ಬಸವರಾಜ್ ಅವರು ದಾಳಿ ನಡೆಸಿ ನಾಲ್ಕು ಜನರನ್ನು ಬಂಧಿಸಿದ್ದಾರೆ.

ಗಂಗೊಳ್ಳಿ ಪೊಲೀಸ್‌ ಠಾಣೆಯ ಪಿಎಸ್ಐ ಯವರಾದ ಬಸವರಾಜ್ ಅವರಿಗೆ ದಿನಾಂಕ 04/01/2025 ರಂದು ಆಲೂರು ಗ್ರಾಮದ ನಂದಿಕೇಶ್ವರ ವೈನ್‌ ಶಾಪ್‌ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಕೋಳಿ ಅಂಕ ಜುಗಾರಿ ಆಟ ಆಡುತ್ತಿರುವುದಾಗಿ ಠಾಣೆಯ ಬೀಟ್‌ ಸಿಬ್ಬಂದಿ ಯಿಂದ ಮಾಹಿತಿ ಬಂದ ಮೇರೆಗೆ  ಪಿ ಎಸ್‌ ಐ  ಅವರು ಕೂಡಲೇ ಠಾಣೆಯ ಇತರ ಸಿಬ್ಬಂದಿಗಳೊಂದಿಗೆ ಕುಂದಾಪುರ ತಾಲೂಕು ಆಲೂರು ಗ್ರಾಮದ ಆಲೂರು ಪೇಟೆ ನಂದಿಕೇಶ್ವರ ವೈನ ಶಾಪ್‌ ಬಳಿಯ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಕೋಳಿ ಅಂಕ ಜುಗಾರಿ ಅಡ್ಡೆಗೆ ದಾಳಿ ನಡೆಸಿದ್ದಾರೆ .

ಸ್ಥಳದಲ್ಲಿ ಕೋಳಿ ಹುಂಜಗಳ ಕಾಲಿಗೆ ಕೋಳಿ ಬಾಳನ್ನು ಕಟ್ಟಿ ಕೋಳಿಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿ ಕೋಳಿ ಅಂಕ ಜುಗಾರಿ ಆಟ ನಡೆಸುತ್ತಿದ್ದ 1)ವೆಂಕಟೇಶ (42)ಆಲೂರು ಗ್ರಾಮ ಕುಂದಾಪುರ, 2) ಅಖಿಲೇಶ (27) ಹೊಸಂಗಡಿ ಗ್ರಾಮ ಕುಂದಾಪುರ, 3)ಮಹೇಶ (29) ಆಲೂರು ಗ್ರಾಮ ಕುಂದಾಫುರ, 4) ಚಿಕ್ಕಯ್ಯ (65) ನಾರ್ಕಳಿ ಹರ್ಕೂರು ಗ್ರಾಮ ಕುಂದಾಫುರ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದು, ಕೋಳಿ ಅಂಕ ಜುಗಾರಿ ಆಟಕ್ಕೆ ಬಳಸಿದ ಕೋಳಿ ಹುಂಜ – 5, ಕತ್ತಿ – 21 (ಕೋಳಿಬಾಳು) ಹಾಗೂ ಕೋಳಿಯ ಕಾಲಿಗೆ ಕೋಳಿ ಬಾಳನ್ನು ಕಟ್ಟಲು ಉಪಯೋಗಿಸಿದ ಹಗ್ಗ – 5 ಹಾಗೂ ಕೋಳಿಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿದ್ದ ನಗದು ಹಣ 6820/- ರೂಪಾಯಿ ಹಾಗೂ ಕೋಳಿ ಅಂಕ ನಡೆಯುವ ಸ್ಥಳದಲ್ಲಿದ್ದ TVS ಫ್ಲೇಮ್‌ ಮೋಟಾರು ಸೈಕಲ್‌ KA-20 W-9863 ವನ್ನು ಸ್ವಾಧಿನಪಡಿಸಿಕೊಂಡಿದ್ದು, ಸ್ವಾಧೀನಪಡಿಸಿದ ಸ್ವತ್ತುಗಳ ಒಟ್ಟು ಮೌಲ್ಯ ರೂಪಾಯಿ 39,320/- ಆಗಿದೆ ಎನ್ನಲಾಗಿದೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಕಲಂ:87, 93 ಕೆ.ಪಿ ಆಕ್ಟ್, ಹಾಗೂ ಕಲಂ: 112,3(5) BNS ಮತ್ತು 11 (1) (A) The Preventions of Cruelty to Animal Act ರಂತೆ ಪ್ರಕರಣ ದಾಖಲಾಗಿದೆ.

error: No Copying!