ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ ಖರ್ಗೆ ಅವರ ರಾಜೀನಾಮೆ ಕೇಳುವ ನೈತಿಕ ಹಕ್ಕು ಬಿಜೆಪಿಯ ಯಾವ ನಾಯಕರಿಗೂ ಇಲ್ಲ ಎಂದು ಸುರೇಶ್ ಶೆಟ್ಟಿ ಬನ್ನಂಜೆ ಹೇಳಿದ್ದಾರೆ
ಈ ಬಿಜೆಪಿ ನಾಯಕರುಗಳು ಇಡೀ ದೇಶದಲ್ಲಿ ಭ್ರಷ್ಟಾಚಾರದಲ್ಲಿ ನಂಬರ್ 1.ಸ್ಥಾನದಲ್ಲಿದ್ದಾರೆ .ಬಿಜೆಪಿ ಎಂದರೆ ಭ್ರಷ್ಟ ಜನರ ಪಾರ್ಟಿ ಎಂದು ಈಗಾಗಲೇ ಸಾಬೀತಾಗಿದೆ. ಈ ಹಿಂದಿನ ರಾಜ್ಯದ ಆಡಳಿತ ನಡೆಸಿದಂತಹ ಬಿಜೆಪಿ ನಾಯಕರುಗಳು ರಾಜ್ಯವನ್ನು ರಾಜ್ಯದ ಖಜಾನೆಯನ್ನು ದಿವಾಳಿಗೊಳಿಸಿ ಗುಡಿಸಿ ಸ್ವಚ್ಛ ಗೊಳಿಸಿರುತ್ತಾರೆ ,ಇಂತಹ ಭ್ರಷ್ಟಾಚಾರಿಗಳು ನಮ್ಮ ರಾಜ್ಯದ ಒಬ್ಬ ನಿಷ್ಠಾವಂತ ಹಾಗೂ ದಲಿತ ಸಮಾಜದ ನಾಯಕ ರಾಜ್ಯದ ಸಚಿವ ಶ್ರೀ ಪ್ರಿಯಾಂಕ ಖರ್ಗೆ ಅವರ ರಾಜೀನಾಮೆಯನ್ನು ಕೇಳುತ್ತಿರುವುದು ಈ ಬಿಜೆಪಿ ನಾಯಕರ ಕೀಳು ಮಟ್ಟದ ರಾಜಕೀಯಕ್ಕೆ ಸಾಕ್ಷಿ.
ಆತ್ಮಹತ್ಯೆ ಮಾಡಿಕೊಂಡಂತಹ ಗುತ್ತಿಗೆದಾರ ಡೆತ್ ನೋಟ್ ನಲ್ಲಿ ಪ್ರಿಯಾಂಕ ಖರ್ಗೆ ಅವರ ಹೆಸರನ್ನು ಉಲ್ಲೇಖಿಸಿಲ್ಲ.ಆದರೂ ಈ ದುಷ್ಟ ಬಿಜೆಪಿಯವರು ಪ್ರಿಯಾಂಕ ಖರ್ಗೆ ಅವರ ರಾಜೀನಾಮೆ ಕೇಳುತ್ತಿದ್ದಾರೆ ಕೇಂದ್ರದ ಮೋದಿ ಸರಕಾರದ ಬೆಲೆ ಏರಿಕೆ ನೀತಿ. ಅಮಿತ್ ಶಾ ರವರ ಅಂಬೇಡ್ಕರ್ ವಿರೋಧಿ ನೀತಿ. ನಿರ್ಮಲ ಸೀತಾರಾಮನ್ ರವರು ಅಗತ್ಯ ವಸ್ತುಗಳ ಮೇಲೆಯು ಜಿಎಸ್‌ಟಿ ಹಾಕಿ ಜನಸಾಮಾನ್ಯರ ಲೂಟಿ ಮಾಡುತ್ತಿದ್ದಾರೆ .
ಇದನ್ನೆಲ್ಲವನ್ನು ಮರೆಮಾಚಲು ಅನಗತ್ಯವಾಗಿ ಪ್ರಿಯಾಂಕ ಖರ್ಗೆ ಅವರನ್ನು ಈ ಬಿಜೆಪಿ ನಾಯಕರು ಟಾರ್ಗೆಟ್ ಮಾಡುತ್ತಿದ್ದಾರೆ.ಒಬ್ಬ ದಲಿತ ನಾಯಕನ ಏಳಿಗೆ ಸಹಿಸಲಾಗದೆ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಈ ಬಿಜೆಪಿಯವರು ಸಂಪೂರ್ಣವಾಗಿ ದಲಿತರ ವಿರೋಧಿಗಳು ಎಂದು ಸಾಬೀತಾಗಿದೆ. ಪ್ರಿಯಾಂಕ ಖರ್ಗೆ ಅವರ ಜೊತೆ ಕೋಟ್ಯಾಂತರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದಾರೆ ಎಂಬುದನ್ನು ಬಿಜೆಪಿ ನಾಯಕರು ತಿಳಿದುಕೊಳ್ಳಲಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಶ್ರೀ ಸುರೇಶ್ ಶೆಟ್ಟಿ ಬನ್ನಂಜೆ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.