Spread the love

ಉಡುಪಿ : ದಿನಾಂಕ : 29/12/2024 (ಹಾಯ್ ಉಡುಪಿ ನ್ಯೂಸ್) ನೀರೆ ಗ್ರಾಮದ ಹೆದ್ದಾರಿಯಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಸಂಚು ನಡೆಸುತ್ತಿದ್ದ ಮೂವರು ಸಮಾಜ ಘಾತುಕರನ್ನು ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ರಾಮಚಂದ್ರ ನಾಯಕ್ ಅವರು ಬಂಧಿಸಿದ್ದಾರೆ.

ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ರಾಮಚಂದ್ರ ನಾಯಕ್ ಅವರಿಗೆ ದಿನಾಂಕ: 28-12-2024 ರಂದು ಕಾರ್ಕಳ ತಾಲೂಕು ನೀರೆ ಗ್ರಾಮದ ನೀರೆಹೆದ್ದಾರಿ ಸಾರ್ವಜನಿಕ ರಸ್ತೆಯಲ್ಲಿ ಕೆಲವು ವ್ಯಕ್ತಿಗಳು ಕಾರಿನಲ್ಲಿ ನಿಷೇದಿತ ಮಾದಕ ವಸ್ತು ಗಾಂಜಾ ಹಾಗೂ MDMA ಪೌಡರ ನ್ನು ಮಾರಾಟ ಮಾಡಲು ಹೊಂದಿರುವ ಬಗ್ಗೆ ದೊರೆತ ಖಚಿತ ಗುಪ್ತ ಮಾಹಿತಿಯ ಮೇರೆಗೆ ಪೊಲೀಸ್ ಅಧೀಕ್ಷಕರ ಸೂಚನೆಯಂತೆ  ಸಿಬ್ಬಂದಿಯವರ ಸಹಕಾರದೊಂದಿಗೆ ಮೇಲಿನ ಸ್ಥಳಕ್ಕೆ ದಾಳಿ ನಡೆಸಿ, ಪ್ರೇಮನಾಥ ಯಾನೆ ಪ್ರೇಮ್‌ ಯಾನೆ ರೇವುನಾಥ, ಶೈಲೇಶ, ಪ್ರಜ್ವಲ್‌, ಎಂಬುವವರನ್ನು  ಬಂಧಿಸಿ, ಆಪಾದಿತರ ಬಳಿ ಇದ್ದ ಯಾವುದೇ ಪರವಾನಿಗೆ ಇಲ್ಲದೇ, ಕಾನೂನು ಬಾಹಿರವಾಗಿ ಮಾರಾಟ ಮಾಡಲು ಹೊಂದಿದ್ದ 37 ಗ್ರಾಂ 27 ಮಿಲಿ ಗ್ರಾಂ ತೂಕದ MDMA, 1 ಕಿಲೋ, 112 ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆದಿದ್ದು MDMA ಅಂದಾಜು ಮೌಲ್ಯ ರೂ. 2,00,000/- ಗಾಂಜಾದ ಅಂದಾಜು ಮೌಲ್ಯ ರೂ. 87,500/- ಆಗಿರುತ್ತದೆ ಎನ್ನಲಾಗಿದೆ .

ಆಪಾದಿತರು ಬಳಸಿದ್ದ ಮೊಬೈಲ್ ಪೋನ್-5, ಅಂದಾಜು ಮೌಲ್ಯ ರೂ. 41,000/-, ಗಾಂಜಾವನ್ನು ಸಾಗಾಟ ಮಾಡಲು ಬಳಸಿದ್ದ ಬೆನ್ನಿಗೆ ಹಾಕಿಕೊಳ್ಳುವ ಬ್ಯಾಗ್-2 , ಚೂರಿ-1, ಕೈಕೊಡಲಿ-1, ಪಾರದರ್ಶಕ ಪ್ಲಾಸ್ಟಿಕ್‌ ಕವರ್-26, ನಗದು ರೂಪಾಯಿ 7130/-, ಮಾದಕ ವಸ್ತು ಮಾರಾಟ ಮಾಡಲು ಬಳಸಿದ KA20MA0160 ನೇ ಕಾರನ್ನು ಹಾಗೂ KA20ER7629 ನೇ ನಂಬ್ರದ ಮೋಟಾರು ಸೈಕಲ ನ್ನು ಪೊಲೀಸರು  ವಶಪಡಿಸಿಕೊಂಡಿದ್ದಾರೆ .ವಶಪಡಿಸಿಕೊಂಡಿರುವ ಸ್ವತ್ತುಗಳ ಒಟ್ಟು ಅಂದಾಜು ಮೌಲ್ಯ ರೂ. 7,86,330/- ಆಗಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆಪಾದಿತ ಪ್ರೇಮ್‌ ಈತನು MDMA ಪೌಡರ ನ್ನು ಬೆಂಗಳೂರು ನಿವಾಸಿ ದಾವೂದ್‌ ಎಂಬವನಿಂದ ಖರೀದಿಸಿರುವ ಬಗ್ಗೆ ತನಿಖೆ ಯಲ್ಲಿ ನುಡಿದಿದ್ದಾನೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ: 22(b) .8(c), 20 (b) (ii), (B) NDPS Act 1985 ರಂತೆ ಪ್ರಕರಣ ದಾಖಲಾಗಿದೆ.

error: No Copying!