Spread the love

ಮಲ್ಪೆ: ದಿನಾಂಕ: 24/12/2024 (ಹಾಯ್ ಉಡುಪಿ ನ್ಯೂಸ್) ಪಡುತೋನ್ಸೆ ಗ್ರಾಮದ ಹಾಡಿಯೊಂದರಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಮಲ್ಪೆ ಪೊಲೀಸ್‌ ಠಾಣೆಯ ಪಿಎಸ್ಐ ಯವರಾದ ಲೋಹಿತ್‌ ಕುಮಾರ್‌ ಸಿ.ಎಸ್‌ ಅವರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ .

ಮಲ್ಪೆ ಪೊಲೀಸ್‌ ಠಾಣೆಯ ಪಿಎಸ್ಐ ಯವರಾದ ಲೋಹಿತ್ ಕುಮಾರ್ ಸಿ ಎಸ್ ಅವರು ದಿನಾಂಕ:23-12-2024 ರಂದು ಠಾಣೆಯಲ್ಲಿರುವಾಗ ಸಾರ್ವಜನಿಕರೋರ್ವರು ಅವರ ಮೊಬೈಲ್ ಗೆ ಕರೆ ಮಾಡಿ ಪಡುತೋನ್ಸೆ ಗ್ರಾಮದ ಕೆಮ್ಮಣ್ಣು ಕೋಡಿ ಕಂಡಾಳ ಬಬ್ಬುಸ್ವಾಮಿ ದೈವಸ್ಥಾನದ ಹತ್ತಿರದ ಹಾಡಿಯಲ್ಲಿ ಕೋಳಿ ಅಂಕ ಆಟ ಆಡುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಲೋಹಿತ್ ಕುಮಾರ್ ಸಿಎಸ್ ಅವರು ಬಂದ ಮಾಹಿತಿಯಂತೆ ಕೂಡಲೇ ಠಾಣೆಯ ಸಿಬ್ಬಂದಿಯವರೊಂದಿಗೆ ಪಡುತೋನ್ಸೆ ಗ್ರಾಮದ ಕೆಮ್ಮಣ್ಣು ಕೋಡಿ ಕಂಡಾಳ ಬಬ್ಬುಸ್ವಾಮಿ ದೈವಸ್ಥಾನದ ಹತ್ತಿರ ಹಾಡಿ ತಲುಪಿದಾಗ ಅಲ್ಲಿ  ಕೋಳಿ ಅಂಕ ಆಟ ಆಡುವುದನ್ನು ಕಂಡು ಅಲ್ಲಿಗೆ ದಾಳಿ ನಡೆಸಿದ್ದು, ಪೊಲೀಸರನ್ನು ಕಂಡು ಕೋಳಿ ಅಂಕ ಆಟ ಆಡುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ಅವರಲ್ಲಿ ಮೂವರು ವ್ಯಕ್ತಿಗಳಾದ 1) ಉಲ್ಲಾಸ್‌ 2) ಸ್ಟೀಫನ್‌ ಪೀಟರ್‌ ಡಿಸೋಜಾ 3) ಶ್ರವಣ ಕುಮಾರ್‌ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದು ಅವರು ಕೋಳಿ ಅಂಕ ಆಟಕ್ಕೆ ಬಳಸಿದ ಕೋಳಿ-1 ಹಾಗೂ ಜೂಜಾಟಕ್ಕೆ ಬಳಸಿದ ಒಟ್ಟು ಹಣ 960/- ರೂಪಾಯಿಯನ್ನು  ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ  ಕಲಂ: 112 ಬಿಎನ್‌ಎಸ್‌, ಕಲಂ:87,93 ಕೆಪಿ ಆಕ್ಟ್‌, ಕಲಂ:11(1)(ಎ) ಪ್ರಾಣಿ ಹಿಂಸೆ ತಡೆ ಕಾಯಿದೆಯಂತೆ ಪ್ರಕರಣ ದಾಖಲಾಗಿದೆ.

error: No Copying!