Spread the love

ಬೈಂದೂರು: ದಿನಾಂಕ:21-12-2024 (ಹಾಯ್ ಉಡುಪಿ ನ್ಯೂಸ್) ಸಾಲ ವಸೂಲಾತಿಗೆ ತೆರಳಿದ್ದ ಸೊಸೈಟಿ ಒಂದರ ಜೀಪು ಚಾಲಕನಿಗೆ ಸಾಲಗಾರನೋರ್ವನ ಕಡೆಯವರು ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುವ ಬಗ್ಗೆ ಸಂತೋಷ  ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಬೈಂದೂರು   ಸಾಗರ ಕ್ರೆಡಿಟ್‌   ಕೋ ಅಪರೇಟಿವ್‌  ಸೊಸೈಟಿಯ   ವಾಹನ  ಚಾಲಕರಾಗಿರುವ ಸಂತೋಷ ಎಂಬವರು ದಿನಾಂಕ  19.12.2024  ರಂದು  ಸೊಸೈಟಿಯ ವತಿಯಿಂದ ಮರುಪಾವತಿಯಾಗದ  ಸಾಲದ  ವಸೂಲಾತಿಯ ಬಗ್ಗೆ   ಸೊಸೈಟಿಯ  ಸಿಬ್ಬಂದಿಯವರೊಂದಿಗೆ   ಸೊಸೈಟಿಯ  ಜೀಪು ನಂಬ್ರ KA 20 MC 7833 ರಲ್ಲಿ ಹೋಗಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಸಂಜೆ ವಾಪಾಸು  ಬೈಂದೂರು  ಕಡೆಗೆ ಉಪ್ಪುಂದ  ಮಾರ್ಗವಾಗಿ ಬರುತ್ತಿರುವಾಗ  ಸಂಜೆ  5.20  ಗಂಟೆ  ಸುಮಾರಿಗೆ  ಉಪ್ಪುಂದ  ಅಂಡರ್‌ ಪಾಸ್‌  ಬಳಿ  ಆರೋಪಿತ ರೋಶನ್‌  ಹಾಗೂ  ಇತರ  3  ಮಂದಿ    KA 01 MT 0065  ನೇ    ಇನೋವಾ ಕಾರಿನಲ್ಲಿ ಬಂದು ಸಂತೋಷರವರು ಚಲಾಯಿಸುತ್ತಿದ್ದ  ಜೀಪನ್ನು ಅಡ್ಡಗಟ್ಟಿ ನಿಲ್ಲಿಸಿ   ಕಾರಿನಲ್ಲಿದ್ದ  ಇತರ    ಮೂವರು ಅಪಾದಿತರೊಂದಿಗೆ  ಇಳಿದು  ಬಂದು   ಸಂತೋಷ ರವರ  ಕಾಲರನ್ನು ಹಿಡಿದು   ತಡೆದು  ನಿಲ್ಲಿಸಿ  ಅವಾಚ್ಯವಾಗಿ  ಬೈದು   ಜೀವ  ಬೆದರಿಕೆ  ಹಾಕಿದ್ದಾರೆ ಎಂದು ಪೋಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಕಲಂ 126 (2), 352 , 351 (2), 3(5) BNS ನಂತೆ ಪ್ರಕರಣ ದಾಖಲಾಗಿದೆ.

error: No Copying!