Spread the love

ಉಡುಪಿ: ದಿನಾಂಕ:18-12-2024(ಹಾಯ್ ಉಡುಪಿ ನ್ಯೂಸ್) ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ,ಜಿಲ್ಲಾ ಪದಾಧಿಕಾರಿಗಳು ಹಾಗೂ  ಸದಸ್ಯರುಗಳಿಂದ ಉಡುಪಿ ಕೆ.ಎಸ್. ಆರ್. ಟಿ.ಸಿ ಬಸ್ ನಿಲ್ದಾಣದಲ್ಲಿ ಇರುವ ಸಮಸ್ಯೆಗಳ ಬಗ್ಗೆ ಇಂದು ಜಿಲ್ಲಾಧಿಕಾರಿಯವರಿಗೆ ದೂರು ನೀಡಲಾಯಿತು.

ಕೆ.ಎಸ್. ಆರ್ ಟಿ.ಸಿ ಬಸ್ ನಿಲ್ದಾಣದಲ್ಲಿ ಇರುವ ಸಮಸ್ಯೆಗಳಾದ ಬಸ್ ನಿಲ್ದಾಣದ ಒಳಗಡೆ ಎ ಟಿ ಎಂ ಸೌಲಭ್ಯ ಇಲ್ಲದೆ ಇರುವುದು ,ಮಹಿಳೆಯರು ಹಾಗೂ ಪುರುಷರಿಗೆ ಶೌಚಾಲಯಕ್ಕೆ ಹೋಗಲು ದುಬಾರಿ ರೂ 10/–ತೆಗೆದುಕೊಳ್ಳುತ್ತಿರುವುದು ,ಬಸ್ ನಿಲ್ದಾಣದಲ್ಲಿ ಕೆಲಸ ಮಾಡಲು ಕೇವಲ ಮೂವರು ಮಹಿಳೆಯರನ್ನು ಇಟ್ಟಿದ್ದು ,ಇಲ್ಲಿ ಪುರುಷರ ಅಗತ್ಯವಿದೆ. ಶೌಚಾಲಯ ಶುಚಿತ್ವ ಇಲ್ಲದೆ ದುರ್ವಾಸನೆ ಬಂದು ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ.

ಬಸ್ ನಿಲ್ದಾಣದಲ್ಲಿ ಬಸ್ ಏಜೆಂಟರ ಕಾಟ ನಡೆಯುತ್ತಿದೆ.ತುಂಬಾ ಜನ ಫ್ರೀ ಬಸ್ ಎಂದು ಬರುತ್ತಾರೆ.ಅವರ ಬಳಿ ಹಣ ಇರುವುದಿಲ್ಲ.
ಈ ಎಲ್ಲಾ ಮೇಲ್ಕಂಡ ವಿಷಯಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಕ್ಷಣಾ ವೇದಿಕೆಯು ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿಯವರ ನೇತೃತ್ವದಲ್ಲಿ  ಜಿಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರೊಂದಿಗೆ ಉಡುಪಿ ಜಿಲ್ಲಾಧಿಕಾರಿಯವರಾದ ಕೆ.ವಿದ್ಯಾ ಕುಮಾರಿ ಅವರಿಗೆ ಮನವಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಅಧ್ಯಕ್ಷರಾದ ಗೀತಾ ಪಾಂಗಾಳ, ಮಹಿಳಾ ಉಪಾಧ್ಯಕ್ಷರಾದ ದೇವಕಿ , ಬ್ರಹ್ಮಾವರ ತಾಲೂಕು ಅಧ್ಯಕ್ಷರಾದ ಸ್ಟಾನಿ ಡಿಸೋಜ, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಜ್ಯೋತಿ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಲ್ಫೋನ್ಸ್, ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಕೃಷ್ಣಕುಮಾರ್, ಜಿಲ್ಲಾ ಮಹಿಳಾ ಕಾರ್ಯದರ್ಶಿ ಚಂದ್ರಕಲಾ, ಜಿಲ್ಲಾ ಮಹಿಳಾ ಜಾಲತಾಣ ಸಂಚಾಲಕಿ ರಶ್ಮಿ, ಜಿಲ್ಲಾ ಸದಸ್ಯರಾದ ಅಶೋಕ್, ಮಲ್ಲು, ಉಪಸ್ಥಿತರಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: No Copying!