Spread the love

ಬ್ರಹ್ಮಾವರ: ದಿನಾಂಕ: 17/12/2024 (ಹಾಯ್ ಉಡುಪಿ ನ್ಯೂಸ್) ಸೀತಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದಲ್ಲಿಗೆ ಬ್ರಹ್ಮಾವರ ಪೊಲೀಸ್‌ ಠಾಣೆಯ ಪೊಲೀಸ್ ನಿರೀಕ್ಷಕರಾದ  ಅಶೋಕ್ ಅವರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.

ಬ್ರಹ್ಮಾವರ ಪೊಲೀಸ್‌ ಠಾಣೆ, ಪೊಲೀಸ್ ಉಪ ನಿರೀಕ್ಷಕರಾದ ಅಶೋಕ್ ಅವರಿಗೆ ಸೀತಾನದಿಯ ಹತ್ತಿರ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದಿದ್ದು, ಅದರಂತೆ ಪೊಲೀಸ್ ಉಪ ನಿರೀಕ್ಷಕರು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋದಾಗ, ಕುದಿ ಗ್ರಾಮದ ರಾಹುಜಟ್ಟಿಗ ದೇವಸ್ಥಾನದ ಬಳಿ ಎದುರಿನಿಂದ ಅಂದರೆ, ಸೀತಾ ನದಿ ಕಡೆಯಿಂದ ಕೆ.ಎ.-20-ಸಿ-5332 ನೇ 407 ಟಿಪ್ಪರ್ ವಾಹನ ಬರುತ್ತಿದ್ದು ಪೊಲೀಸರು ತಡೆದು ನಿಲ್ಲಿಸಿ ಟಿಪ್ಪರ್ ಚಾಲಕನನ್ನು ಕೆಳಗಿಳಿಸಿ, ಪರಿಶೀಲಿಸಿದಾಗ ಟಿಪ್ಪರ್ ನಲ್ಲಿ ಮರಳು ತುಂಬಿರುವುದು ಕಂಡುಬಂದಿದ್ದು ಚಾಲಕನನ್ನು ಪೊಲೀಸರು ವಿಚಾರಿಸಿದಾಗ ಕೃಷ್ಣ ( 37) ಮುದ್ದೂರು ಗ್ರಾಮ, ಎಂಬುದಾಗಿಯೂ ಮಂಜುನಾಥ ಎಂಬವರ ಸೂಚನೆಯ ಮೇರೆಗೆ ತಾನು ಮರಳು ಲೋಡ್ ಮಾಡಲು ಬಂದಿರುವುದಾಗಿಯೂ, ಮರಳು ಸಾಗಾಟ ಮಾಡಲು ಟ್ರಿಪ್ ಶೀಟ್ ಇರುವುದಿಲ್ಲ ಎಂಬುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.

ವಾಹನದಲ್ಲಿ ಸುಮಾರು 5,000 ರೂ ಮೌಲ್ಯದ ಸುಮಾರು 1 ಯೂನಿಟ್‌ ನಷ್ಟು ಮರಳು ತುಂಬಿದ್ದು ಈ  407 ಟಿಪ್ಪರ್ ಹಿಂಭಾಗದಲ್ಲಿ ಜೆ.ಸಿ.ಬಿ. ಇದ್ದು, ಅದನ್ನು  ಪೊಲೀಸರು ಪರಿಶೀಲನೆ ನಡೆಸಿದಾಗ ಕೆ.ಎ.-20-ಎಂಬಿ-4809 ನಂಬ್ರದ ಜೆ.ಸಿ.ಬಿ. ಆಗಿದ್ದು ,ಚಾಲಕನ ಹೆಸರು ವಿಳಾಸ ವಿಚಾರಣೆ ನಡೆಸಿದಾಗ ರಾಜು, (38) ಗದಗ ಹಾಲಿವಾಸ: ಪ್ರಸಾದ್ ರವರ ಬಾಡಿಗೆ ಮನೆ, ಮುದ್ದೂರು ಗ್ರಾಮ, ಎಂಬುದಾಗಿ ತಿಳಿಸಿರುತ್ತಾನೆ ಎನ್ನಲಾಗಿದೆ.

ಮರಳುಗಾರಿಕೆ ನಡೆಸಲು ಯಾವುದಾದರೂ ಪರವಾನಿಗೆ ಇದೆಯೇ ಎಂಬುದಾಗಿ ಕೇಳಿದಾಗ  ಇರುವುದಿಲ್ಲ ಎಂಬುದಾಗಿ ತಿಳಿಸಿ, ಜೆ.ಸಿ.ಬಿ. ಮಾಲಿಕ ಮಂಜುನಾಥ ಅವರು ಮರಳನ್ನು 407 ನೆ ಟಿಪ್ಪರ್ ಗೆ ಲೋಡ್ ಮಾಡುವಂತೆ ತಿಳಿಸಿದ ಮೇರೆಗೆ ಈ ದಿನ ಮರಳು ಲೋಡ್ ಮಾಡಿರುವುದಾಗಿ ತಿಳಿಸಿರುತ್ತಾನೆ ಎಂದು ಪೊಲೀಸರು ದೂರಿನಲ್ಲಿ ತಿಳಿಸಿದ್ದಾರೆ.

.ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ  US 4(1A), 21(4) MMDR ACT & US 112, 303(2) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!