Spread the love
  • ಕುಂದಾಫುರ: ದಿನಾಂಕ: 17/12/2024 ( ಹಾಯ್ ಉಡುಪಿ ನ್ಯೂಸ್) ಕಾಳಾವರ ಗ್ರಾಮದ ಹಾಡಿ ಯೊಂದರಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಐದು ಜನರನ್ನು ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯ ಪಿಎಸ್ಐ ಯವರಾದ ಭೀಮಾಶಂಕರ ಸಿನ್ನೂರ ಸಂಗಣ್ಣ, ಅವರು ಬಂಧಿಸಿದ್ದಾರೆ.
  • ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಐಯವರಾದ ಭೀಮಾಶಂಕರ ಸಿನ್ನೂರ ಸಂಗಣ್ಣ ಅವರಿಗೆ ದಿನಾಂಕ : 17-12-2024 ರಂದು ಬೆಳಗ್ಗಿನ ಜಾವ 1-45 ಘಂಟೆಗೆ ಮಾಹಿತಿದಾರರೋರ್ವರು ಪೋನ್‌ ಮಾಡಿ ಕುಂದಾಪುರ ತಾಲೂಕು ಕಾಳಾವರ ಗ್ರಾಮದ ACEBOND ಫ್ಯಾಕ್ಟರಿಯ ಹಿಂಬದಿಯಲ್ಲಿರುವ ಸರ್ಕಾರಿ ಹಾಡಿ ಜಾಗದಲ್ಲಿ ಕೆಲವು ವ್ಯಕ್ತಿಗಳು ಸೇರಿಕೊಂಡು ಹಣವನ್ನು ಪಣವಾಗಿಟ್ಟು ತಮ್ಮ ಸ್ವಂತ ಲಾಭಕ್ಕಾಗಿ ಇಸ್ಪೀಟು ಎಲೆಗಳಿಂದ ಅಂದರ್ – ಬಾಹರ್ ಎಂಬ ಇಸ್ಪೀಟು ಆಟವಾಡುತ್ತಿದ್ದಾರೆಂದು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
  • ಮಾಹಿತಿ ಬಂದ ಮೇರೆಗೆ ಕೂಡಲೇ ಪಿಎಸ್ಐ ಯವರು ಠಾಣೆಯ ಸಿಬ್ಬಂದಿಗಳೊಂದಿಗೆ  ಸ್ಥಳಕ್ಕೆ ತಲುಪಿದಾಗ  ಸಾರ್ವಜನಿಕ ಹಾಡಿಯಲ್ಲಿ ವೃತ್ತಾಕಾರದಲ್ಲಿ ನೆಲದ ಮೇಲೆ ಪ್ಲಾಸ್ಟಿಕ್‌ ಚೀಲ ಹಾಸಿಕೊಂಡು 5 ಜನರು ಕುಳಿತುಕೊಂಡು ಅವರಲ್ಲಿ ಒಬ್ಬಾತನು ಇಸ್ಪೀಟ್‌ ಎಲೆಗಳನ್ನು ಹಾಕುತ್ತಿದ್ದು ಉಳಿದವರು 100 ರೂಪಾಯಿ ಒಳಗೆ, 100 ರೂಪಾಯಿ ಹೊರಗೆ ಎಂದು ಹಣವನ್ನು ಪಣವಾಗಿ ಕಟ್ಟಿ  ಅಂದರ್‌– ಬಾಹರ್‌ ಎಂಬ ಇಸ್ಪೀಟ್‌ ಜುಗಾರಿ ಆಟ ಆಡುತ್ತಿದ್ದಲ್ಲಿಗೆ ದಾಳಿ ನಡೆಸಿದಾಗ ಒಬ್ಬನು ಹಾಡಿಯಲ್ಲಿ ಓಡಿ ತಪ್ಪಿಸಿಕೊಂಡಿದ್ದು, ಉಳಿದ 1) ಚಂದ್ರ (49) ಅಸೋಡು ಗ್ರಾಮ, ಕುಂದಾಪುರ ತಾಲೂಕು,2) ದಿನೇಶ್ (35) ಕಾಳಾವರ ಗ್ರಾಮ, ಕುಂದಾಪುರ ತಾಲೂಕು 3) ಸುಧಾಕರ (37) ವಕ್ವಾಡಿ ಗ್ರಾಮ, ಕುಂದಾಪುರ ತಾಲೂಕು 4) ಕೇಶವ (35) ಕೋಣಿ ಗ್ರಾಮ, ಕುಂದಾಪುರ ತಾಲೂಕು.5) ಗೋಪಾಲ (45) ಕಾಳಾವರ ಗ್ರಾಮ, ಕುಂದಾಪುರ ತಾಲೂಕು ಎಂಬವರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದು ,ಅವರು ಇಸ್ಪೀಟ್‌ ಜುಗಾರಿ ಆಟಕ್ಕೆ ಬಳಸಿದ್ದ ನಗದು ರೂ 12,270/-, 2) ಬಿಳಿ ಬಣ್ಣದ ಪ್ಲಾಸ್ಟಿಕ್‌ ಚೀಲ-1, 3) ಅರ್ಧ ಸುಟ್ಟ ಕ್ಯಾಂಡಲ್ -03 & ಹೊಸ ಕ್ಯಾಂಡಲ್-03, 4) 52 ಇಸ್ಪೀಟ್ ಎಲೆಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
  • ಈ ಬಗ್ಗೆ ಕುಂದಾಫುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  ಕಲಂ: 112 BNS & 87 KP Act ರಂತೆ ಪ್ರಕರಣ ದಾಖಲಾಗಿದೆ.

error: No Copying!