ಕುಂದಾಪುರ: ದಿನಾಂಕ 13/12/2024 (ಹಾಯ್ ಉಡುಪಿ ನ್ಯೂಸ್) ಹಟ್ಟಿಯಂಗಡಿ ಗ್ರಾಮದ ನಿಸರ್ಗಬಾರ್ ಹಿಂದಿನ ಹಾಡಿಯಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ನಾಲ್ವರನ್ನು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಭೀಮಾಶಂಕರ ಸಿನ್ನೂರ ಸಂಗಣ್ಣ ಅವರು ಬಂಧಿಸಿದ್ದಾರೆ.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಭೀಮಾ ಶಂಕರ ಸಿನ್ನೂರ ಸಂಗಣ್ಣ ಅವರಿಗೆ ದಿನಾಂಕ : 12-12-2024 ರಂದು ಕುಂದಾಪುರ ತಾಲೂಕು ಹಟ್ಟಿಯಂಗಡಿ ಗ್ರಾಮದ ನಿಸರ್ಗ ಬಾರ್‌ನ ಹಿಂದುಗಡೆ ಹಾಡಿಯಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು ಇಸ್ಪೀಟು ಜುಗಾರಿ ಆಟವಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ. ಕೂಡಲೇ ದಾಳಿ ನಡೆಸಿ 1) ಭಾಸ್ಕರ, 2) ದಿನೇಶ, , 3) ರೋಹಿತ್, 4) ಅರುಣ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಅವರು ಇಸ್ಪೀಟ್ ಜುಗಾರಿ ಆಟಕ್ಕೆ ಬಳಸಿದ್ದ ನಗದು ರೂಪಾಯಿ 2,240/-, ಪ್ಲಾಸ್ಟಿಕ್ ಚೀಲ, ಇಸ್ಪೀಟ್ ಎಲೆಗಳನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 112 BNS & 87 KP Act ರಂತೆ ಪ್ರಕರಣ ದಾಖಲಾಗಿದೆ.