ಕಾರ್ಕಳ: ದಿನಾಂಕ: 11-12-2024(ಹಾಯ್ ಉಡುಪಿ ನ್ಯೂಸ್) ಹೋಂ ನರ್ಸ್ ಕೆಲಸಕ್ಕೆ ಬಂದವನು ಮನೆಯವರ ಮೊಬೈಲ್ ನಲ್ಲಿ ಗೂಗಲ್ ಪೇ ಮೂಲಕ ಹತ್ತು ಲಕ್ಷ ರೂಪಾಯಿ ವರ್ಗಾವಣೆ ಮಾಡಿಕೊಂಡು ವಂಚನೆ ನಡೆಸಿದ್ದಾನೆ ಎಂದು ಶಶಿಧರ (75) ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕಾರ್ಕಳ ಕಸಬಾ ಗ್ರಾಮ ನಿವಾಸಿ ಶಶಿಧರ (75) ಎಂಬವರು ಮಗಳೊಂದಿಗೆ ವಾಸವಾಗಿದ್ದು ದಿನಾಂಕ 03/11/2024 ರಂದು ಆರೋಪಿ ರತ್ನಾಕರ ಎಂಬಾತನ ಅಲೈಟ್‌ಕೇರ್ ಎಂಬ ಸಂಸ್ಥೆಯ ಮುಖಾಂತರ ಆರೋಪಿ ಕಾರ್ತಿಕ ಎಂಬುವವ ಹೋಂ ನರ್ಸ್ ಕೆಲಸಕ್ಕೆ ಬಂದಿರುತ್ತಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿಗಳು ಶಶಿಧರರವರಿಗೆ ಮೋಸ ಮಾಡುವ ಉದ್ದೇಶದಿಂದ ದಿನಾಂಕ. 09/11/2024 ರಂದು 1ನೇ ಆರೋಪಿ ಕಾರ್ತಿಕನು 2 ನೇ ಆರೋಪಿ ರತ್ನಾಕರನ ಖಾತೆಗೆ ಗೂಗಲ್ ಪೇ ಮಾಡುವಂತೆ ಶಶಿಧರ ರವರಿಗೆ ನಗದು 10,000/- ಹಣ ನೀಡಿ ಒತ್ತಾಯ ಪೂರ್ವಕವಾಗಿ 1 ನೇ ಆರೋಪಿ ಕಾರ್ತಿಕನ ಬ್ಯಾಂಕ್ ಖಾತೆಗೆ ಶಶಿಧರ ಅವರ ಬ್ಯಾಂಕ್ ಖಾತೆಯಿಂದ ಗೂಗಲ್ ಪೇ ಮಾಡಿಸಿದ್ದನು ಎಂದು ದೂರಿದ್ದಾರೆ.
ಈ ಸಮಯ ಗೂಗಲ್ ಪೇ ಪಿನ್ ನಂಬ್ರ ನೋಡಿದ್ದ 1 ನೇ ಆರೋಪಿ ಹೋಂ ನರ್ಸ್ ಕಾರ್ತಿಕನು ದಿನಾಂಕ 10/11/2024 ರಿಂದ ದಿನಾಂಕ. 08/12/2024 ರ ವರೆಗೆ ಶಶಿಧರ ರವರ ಯುನಿಯನ್ ಬ್ಯಾಂಕ್ ಕಾರ್ಕಳ ಶಾಖೆಯ ಖಾತೆ ಯಿಂದ ಗೂಗಲ್ ಪೇ ಮುಖಾಂತರ 9,80,000/- ರೂ ಹಣವನ್ನು 1 ನೇ ಆರೋಪಿ ಕಾರ್ತಿಕ ನ ಮೊಬೈಲ್ ನಂಬ್ರ ಇರುವ ಭಾರತ್ ಬ್ಯಾಂಕ್ ಕೋ-ಅಪರೇಟಿವ್ ಸೊಸೈಟಿ ಖಾತೆಗೆ ಗೂಗಲ್ ಪೇ ಮುಖಾಂತರ ವರ್ಗಾವಣೆ ಮಾಡಿಕೊಂಡು ನಂಬಿಕೆ ದ್ರೋಹ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 316(2) 318(2) 318(4) ಜೊತೆಗೆ 3(5) ಬಿ,ಎನ್,ಎಸ್ ರಂತೆ ಪ್ರಕರಣ ದಾಖಲಾಗಿದೆ.