Spread the love

ಮಣಿಪಾಲ: ದಿನಾಂಕ:10-12-2024(ಹಾಯ್ ಉಡುಪಿ ನ್ಯೂಸ್) ಹೋಟೆಲ್ ಒಂದರಲ್ಲಿ ರೂಂ ಪಡೆದ ವ್ಯಕ್ತಿಯೋರ್ವ ಬಿಲ್ ನೀಡದೆ ವಂಚಿಸಿ ಪರಾರಿಯಾಗಿದ್ದಾನೆ ಎಂದು ಹೋಟೆಲ್ ಮೆನೇಜರ್ ಪೋಲೀಸರಿಗೆ ದೂರು ನೀಡಿದ್ದಾರೆ.

ಉಡುಪಿ ಅಜ್ಜರಕಾಡು ನಿವಾಸಿ ನಿತಿನ್ (39) ಎಂಬವರು ಮಣಿಪಾಲ ಕಂಟ್ರಿ ಇನ್‌ ಹೋಟೆಲ್‌ ನಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ದಿನಾಂಕ 07/12/2024 ರಂದು ಮಧ್ಯಾಹ್ನ  ಆರೋಪಿ ಬಿಮ್‌ಸೆಂಟ್‌ ಜೊನ್‌ (67) ಎಂಬಾತ ತನಗೆ ಕಾನ್ಪರೆನ್ಸ್‌ ಮೀಟಿಂಗ್‌ ಇದೆ ಎಂಬುದಾಗಿ ಹೇಳಿ ಹೊಟೇಲಿನಲ್ಲಿ ರೂಮ್‌ ಪಡೆದುಕೊಂಡು ಅಡ್ವಾನ್ಸ್‌ ಹಣವನ್ನು ದಿನಾಂಕ 09/12/2024 ರಂದು ಕೊಡುವುದಾಗಿಯೂ ದಿನಾಂಕ 12/12/2024 ರಂದು ರೂಮ್‌ ಚೆಕ್ ‌ಔಟ್‌ ಮಾಡುವುದಾಗಿ ನಿತಿನ್ ರವರನ್ನು ನಂಬಿಸಿ ‌ ರೂಮ್‌ ನಲ್ಲಿ ಉಳಿದುಕೊಂಡು ಹೊಟೇಲ್‌ ನಲ್ಲಿಯೇ ಊಟ ತಿಂಡಿ ಮಾಡಿ ಒಟ್ಟು 39,298/- ರೂಪಾಯಿ ಬಿಲ್‌ ಮಾಡಿ ಹಣ ಕೊಡದೇ ಪರಾರಿಯಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ನಿತಿನ್ ಅವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ  ಕಲಂ: 316(2), 318(4) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!