Spread the love

ಉಡುಪಿ: ದಿನಾಂಕ:10-12-2024 (ಹಾಯ್ ಉಡುಪಿ ನ್ಯೂಸ್)  ದುಶ್ಚಟಗಳಿಗೆ ಸಾಲ ಮಾಡಿದ್ದ ಗಂಡ ಹಾಗೂ ಗಂಡನ ಮನೆಯವರು ತವರು ಮನೆಯಿಂದ ಹಣ ತರುವಂತೆ ಒತ್ತಾಯಿಸಿ ಮಾನಸಿಕ ದೈಹಿಕ ಹಿಂಸೆ ನೀಡಿ ಮನೆಯಿಂದ ಹೊರ ಹಾಕಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಉಡುಪಿ ತೆಂಕನಿಡಿಯೂರು ಗ್ರಾಮದ ನಿವಾಸಿ ಸ್ವಾತಿ ಎಂಬವರು ಸಂಬಂಧಿಯಾದ  ಯೋಗೀಶ್ ಎಂಬವರನ್ನು ಪ್ರೀತಿಸಿ ದಿನಾಂಕ 15/02/2021 ರಂದು ಮದುವೆಯಾಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮದುವೆ ಖರ್ಚಿನ ಬಗ್ಗೆ  ಸ್ವಾತಿಯವರಿಂದ ಹಾಗೂ ಅವರ ಮನೆಯವರಿಂದ ಹಣವನ್ನು ಪಡೆದಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಗಂಡ ಯೋಗೀಶನು ವಿಪರೀತ ಸಾಲ ಮಾಡಿದ್ದು ಮತ್ತು ಆನ್ ಲೈನ್ ಗೇಮಿಂಗ್ ಆಟ ಆಡಿ ಹಣ ಕಳೆದುಕೊಂಡಿದ್ದು  ಸ್ವಾತಿಯವರಿಗೆ ತಾಯಿ ಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದುದಲ್ಲದೇ ಒಡವೆಗಳನ್ನು ಅಡವಿಟ್ಟು ಸ್ವಾತಿ ರವರಿಗೆ ದೈಹಿಕ ಹಿಂಸೆ, ಹಲ್ಲೆ ಮಾಡಿರುತ್ತಾನೆ ಎಂದು ದೂರಿದ್ದಾರೆ.

ಗಂಡ ಯೋಗೀಶನ ತಾಯಿಯು ಸ್ವಾತಿ ರವರಿಗೆ ಕರೆಮಾಡಿ ಸಾಲವನ್ನು ಕಟ್ಟಬೇಕು ಇಲ್ಲವಾದಲ್ಲಿ ಮನೆಗೆ ಸೇರಿಸದೇ ಹೊರಗೆ ಹಾಕುವುದಾಗಿ ಮತ್ತು ಯೋಗೀಶ್ ನ ತಮ್ಮ  ಮತ್ತು ಅಕ್ಕ  ಕೂಡಾ  ಸ್ವಾತಿ ರವರ ಚಿನ್ನವನ್ನು ಬಿಡಿಸಿಕೊಡುವುದಿಲ್ಲ ನೀನು ನಮ್ಮ ಮನೆಗೆ ಸೇರಿದವಳಲ್ಲ ಎಂದು ಹೇಳಿ ಅವರೆಲ್ಲರೂ ಸಾಲ ಮಾಡಿ ಹಣ ಕೊಡುವಂತೆ ಒತ್ತಾಯಿಸಿದ ಮೇರೆಗೆ ಸ್ವಾತಿ ರವರು ಸಾಲ ಮಾಡಿ ಹಣವನ್ನು ಕೊಟ್ಟಿದ್ದು 46,00,000/- ಹಣ ಬಲವಂತವಾಗಿ ಗಂಡನ ಮನೆಯವರು ಪಡೆದಿರುತ್ತಾರೆ ಎಂದು ದೂರಿದ್ದಾರೆ.

ನಂತರ ಬೆಂಗಳೂರಿನಿಂದ ಗಂಡನ ಮನೆಯಾದ ಪೆರ್ಡೂರಿಗೆ ಬಂದಿದ್ದು 2024 ರ ಸೆಪ್ಟಂಬರ್ ನಲ್ಲಿ ಒಂದು ದಿನ ಆರೋಪಿಗಳೆಲ್ಲರೂ ಸೇರಿ ಇನ್ನೂ ಹೆಚ್ಚಿನ ಹಣ ಕೊಡದಿದ್ದಲ್ಲಿ ಮನೆಗೆ ಬರುವುದು ಬೇಡ ಎಂದು ಮನೆಯಿಂದ ಹೊರಗೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನಂತರ ಗಂಡ ಯೋಗೀಶನು ಸ್ವಾತಿರವರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ  ಕಲಂ: 85, 115(2), 351(2) ಜೊತೆಗೆ 3 (5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!