- ಬ್ರಹ್ಮಾವರ: ದಿನಾಂಕ 09/12/2024(ಹಾಯ್ ಉಡುಪಿ ನ್ಯೂಸ್) ಹೆಗ್ಗುಂಜೆ ಗ್ರಾಮದ ಹಾಡಿಯಲ್ಲಿ ಕೋಳಿ ಅಂಕ ಜುಗಾರಿ ಆಡುತ್ತಿದ್ದಲ್ಲಿಗೆ ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ( ಕಾ.&ಸು.) ಅಶೋಕ ಮಾಳಬಾಗಿ ಅವರು ದಾಳಿ ನಡೆಸಿ ಆರು ಜನರನ್ನು ಬಂಧಿಸಿದ್ದಾರೆ.
- ಬ್ರಹ್ಮಾವರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಅಶೋಕ ಮಾಳಬಾಗಿ ಅವರಿಗೆ ದಿನಾಂಕ :08-12-2024 ರಂದು ಬ್ರಹ್ಮಾವರ ತಾಲೂಕು ಹೆಗ್ಗುಂಜೆ ಗ್ರಾಮದ ಗಳಿನ್ ಕೊಡ್ಲು ಹಾಡಿಯಲ್ಲಿ ಹಣವನ್ನು ಪಣವಾಗಿಟ್ಟು ಕೋಳಿಗಳ ಕಾಲಿಗೆ ಹರಿತವಾದ ಕೋಳಿ ಬಾಲ್ ಕಟ್ಟಿ ಕೋಳಿ ಅಂಕ ಜುಗಾರಿ ಆಟ ನಡೆಯುತ್ತಿದ್ದ ಬಗ್ಗೆ ಬಂದ ಗುಪ್ತ ಮಾಹಿತಿಯಂತೆ ಕೂಡಲೇ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
- ದಾಳಿ ನಡೆಸಿದಾಗ ಅಲ್ಲಿ ಸೇರಿದ್ದ ಜನರು ಕಾದಾಟ ಮಾಡುತ್ತಿದ್ದ ಕೋಳಿಗಳನ್ನು ಮತ್ತು ಅವರ ಬಳಿ ಇದ್ದ ಕೋಳಿಗಳನ್ನು ಹಿಡಿದುಕೊಂಡು ಓಡಿ ಹೋಗುತ್ತಿದ್ದು, ಓಡಿ ಹೋಗುತ್ತಿದ್ದವರ ಪೈಕಿ 1) ಸುಧಾಕರ್, 2) ಆನಂದ, 3) ಗಿರೀಶ, 4) ಶರತ, 5) ಜನಾರ್ಧನ, 6) ನಾರಾಯಣ ಎಂಬವರನ್ನು ಹಿಡಿದು, ಜೂಜಾಟಕ್ಕೆ ಬಳಸಿದ ಹಣ 14,980/- ರೂಪಾಯಿ, ಜೂಜಿಗೆ ಕಟ್ಟಿದ 5 ಕೋಳಿಗಳು ಹಾಗು ಅವುಗಳ ಕಾಲಿಗೆ ಕಟ್ಟಿದ 2 ಕೋಳಿ ಬಾಳ್ ಮತ್ತು ಕೋಳಿ ಕಾಲಿಗೆ ಕಟ್ಟಿದ ನೈಲಾನ್ ಹಗ್ಗ -3 ದೊರೆತಿದ್ದು . ಓಡಿ ಹೋದವರ ಬಗ್ಗೆ ಪೊಲೀಸರು ವಿಚಾರಿಸಿದಾಗ ಈ ಕೋಳಿ ಅಂಕ ಜುಗಾರಿಯನ್ನು ನಡೆಸುತ್ತಿದ್ದ ಮಾಧವ ಮತ್ತು ಇತರರು ಓಡಿ ಹೋಗಿದ್ದಾರೆ ಎಂದು ಬಂಧಿತರು ತಿಳಿಸಿದ್ದಾರೆ ಎಂದು ದೂರು ನೀಡಿದ್ದಾರೆ.
- ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 112 BNS & 87 93 ಕೆ.ಪಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿದೆ.