- ಮಲ್ಪೆ: ದಿನಾಂಕ 09/12/2024 (ಹಾಯ್ ಉಡುಪಿ ನ್ಯೂಸ್) ಪಡುಕರೆ ಬೀಚ್ ನ ಸಾರ್ವಜನಿಕರು ನಡೆದಾಡುವ ಮರಳು ಜಾಗದಲ್ಲಿ ಅಪಾಯಕಾರಿಯಾಗಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವ್ಯಕ್ತಿ ಯನ್ನು ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಲೋಹಿತ್ ಕುಮಾರ್ ಅವರು ಬಂಧಿಸಿದ್ದಾರೆ.
- ಮಲ್ಪೆ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಲೋಹಿತ್ ಕುಮಾರ್ ಅವರು ದಿನಾಂಕ:08-12-2024ರಂದು ರೌಂಡ್ಸ್ ಕರ್ತವ್ಯದಲ್ಲಿ ಇರುವಾಗ ಒಬ್ಬ ವ್ಯಕ್ತಿ ಪಡುಕೆರೆ ಬೀಚ್ ನಲ್ಲಿ ಮರಳಿನಲ್ಲಿ ಸಾವರ್ಜನಿಕರು ಓಡಾಡುವ ಜಾಗದಲ್ಲಿ ನಂಬರ್ ಪ್ಲೇಟ್ ಇಲ್ಲದ ಬಿಳಿ ಬಣ್ಣದ ದ್ವಿ ಚಕ್ರ ವಾಹನವನ್ನು ಓಡಿಸಿ ಸಾರ್ವಜನಿಕರಿಗೆ ಶಾಂತಿ ಭಂಗ ಉಂಟು ಮಾಡುತ್ತಿರುವುದಾಗಿ ಸಾರ್ವಜನಿಕರಿಂದ ಬಂದ ಮಾಹಿತಿ ಮೇರೆಗೆ ಕೂಡಲೇ ಪಡುಕೆರೆಯ ಬೀಚ್ ಗೆ ಹೋದಾಗ ಪಡುಕೆರೆ ಬೀಚ್ ನ ಸಾರ್ವಜನಿಕ ಸ್ಥಳದಲ್ಲಿ, ಮರಳು ಪ್ರದೇಶದಲ್ಲಿ ತನ್ನ ನಂಬರ್ ಪ್ಲೇಟ್ ಇಲ್ಲದ ಬಿಳಿ ಬಣ್ಣದ Honda Aviator ದ್ವಿ ಚಕ್ರ ವಾಹನವನ್ನು ಬೀಚ್ ನ ಮರಳಿನಲ್ಲಿ ಅತ್ತಿಂದಿತ್ತ ಸವಾರಿ ಮಾಡಿಕೊಂಡು ಸಾರ್ವಜನಿಕರ ನೆಮ್ಮದಿಗೆ, ಶಾಂತಿಗೆ ಭಂಗ ಮಾಡುತ್ತಿರುವುದು ಕಂಡು ಆ ವ್ಯಕ್ತಿ ಯನ್ನು ತಡೆದು ನಿಲ್ಲಿಸಿದ್ದಾರೆ .
- ಪೊಲೀಸರು ದ್ವಿಚಕ್ರ ವಾಹನ ಸವಾರನಲ್ಲಿ ಹೆಸರು ಮತ್ತು ವಿಳಾಸ ವಿಚಾರಿಸಿದಾಗ ಎಸ್ ಎಮ್ ಶಫಿ (50) ಎಂದು ತಿಳಿಸಿದ್ದು, ದ್ವಿ ಚಕ್ರ ವಾಹನ ಸವಾರ ಮಲ್ಪೆ ಪಡುಕೆರೆ ಬೀಚ್ ನಲ್ಲಿ ಸಾರ್ವಜನಿಕರು ಓಡಾಡುವ ಮರಳು ಪ್ರದೇಶದಲ್ಲಿ ತನ್ನ ನಂಬರ್ ಪ್ಲೇಟ್ ಇಲ್ಲದ ಬಿಳಿ ಬಣ್ಣದ Honda Aviator ದ್ವಿ ಚಕ್ರ ವಾಹನವನ್ನು ಅಂತಿಂದಿತ್ತ ಸವಾರಿ ಮಾಡಿಕೊಂಡು ಸಾರ್ವಜನಿಕರ ನೆಮ್ಮದಿಗೆ, ಶಾಂತಿಗೆ ಭಂಗ ಉಂಟು ಮಾಡಿದ್ದಾನೆ ಎಂದು ದೂರು ನೀಡಿದ್ದಾರೆ.
- ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ: 292 ಬಿಎನ್‌ಎಸ್ ಮತ್ತು 51,177 IMV ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.