ಮಲ್ಪೆ: ದಿನಾಂಕ:06-12-2024(ಹಾಯ್ ಉಡುಪಿ ನ್ಯೂಸ್) ನೀವು ನಿಮ್ಮ ಧರ್ಮ, ಯಾರ ಜೊತೆಬೇಕಾದರೂ ಚೆಲ್ಲಾಟವಾಡಿ ಆದರೆ ಸಂವಿಧಾನದ ಸೆರಗಿಗೆ ಕೈಹಾಕಿದರೆ ನಿಮ್ಮನ್ನು ಸುಟ್ಟು ಬೂದಿಮಾಡುವ ದಲಿತರ ದಂಡು ಸಿದ್ದವಿದೆ ಎಂಬುದನ್ನು ಮರೆಯಬೇಡಿ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಎಚ್ಚರಿಸಿದ್ದಾರೆ.
ಅವರು ಮಲ್ಪೆ ಗಾಂಧಿಶತಾಬ್ಧಿ ಶಾಲಾ ಮೈದಾನದಲ್ಲಿ ಮಕ್ಕಳ ಜೊತೆ ಅಂಬೇಡ್ಕರ್ ಯುವಸೇನೆಯ ಜಿಲ್ಲಾ ಘಟಕ ಆಯೋಜಿಸಿದ ಸಂವಿಧಾನ ಶಿಲ್ಪಿ,ಭೋಧಿಶತ್ವ ಡಾ.ಬಿ,ಆರ್.ಅಂಬೇಡ್ಕರ್ ರವರ ೬೮ನೇ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಮಾತನಾಡುತ್ತಾ,
ಧಾರ್ಮಿಕತೆಯೆಂದು ಜಾತೀಯತೆ ಭೋಧಿಸುವ ನಿಮ್ಮ ಧರ್ಮ ದಲಿತರನ್ನು ಕ್ರೂರವಾಗಿ ಹಿಂಸೆಮಾಡಿದೆ,ಸಹಾನುಭೂತಿ,ಸಮಾನತೆ ಮತ್ತು ಸ್ವಾತಂತ್ರ್ಯ ಈ ಮೂರು ಅಂಶಗಳಿಲ್ಲದ ನಿಮ್ಮ ಧರ್ಮ ಕೊಚ್ಚೆಯ ರಾಶಿ.
ಇಂತಹ ಧರ್ಮದ ಹೆಸರಿನಲ್ಲಿ ಸಂವಿಧಾನದ ಬುಡಕ್ಕೆ ಕೈಹಾಕಿದರೆ ನೀವು ಬಿಡಿ ,ನಿಮ್ಮ ಧರ್ಮ ,ದೇವರು ಯಾರೂ ಇರಲಾರರು ಎಂದರು.
ಧರ್ಮ ಇರುವುದು ಮನುಷ್ಯನಿಗಾಗಿ,ಮನುಷ್ಯ ನಿರುವುದು ಧರ್ಮಕ್ಕಲ್ಲ. ನಿಮ್ಮ ಧರ್ಮದಲ್ಲಿರುವ ಅಸಮಾನತೆ ಜಗತ್ತಿನ ಯಾವ ಧರ್ಮದಲ್ಲೂ ಸಿಗುವುದಿಲ್ಲ ಎಂದ ಜಯನ್ ಮಲ್ಪೆ ಇಂದಿನ ನಿಮ್ಮ ಧರ್ಮಕ್ಕೆ ದೇವರು ,ನೀತಿ ಎರಡೂ ಇಲ್ಲ.ಇಂತಹ ಸ್ಥಿತಿ ಕೇವಲ ಮಾನವನ ಮನಸ್ಸಿನ ಪತನಕ್ಕೆ ದಾರಿಮಾಡಿಕೊಡುತ್ತದೆ ಎಂದರು.
ಹಿರಿಯ ದಲಿತ ಮುಖಂಡ ಕೆ.ಕರುಣಾಕರ ಮಾಸ್ತರ್ ಮಾತನಾಡಿ ಸಂವಿಧಾನ ಉಳಿದರೆ ಮಾತ್ರ ನಮ್ಮ ಬದುಕು.ಮಕ್ಕಳು ಅಂಬೇಡ್ಕರ್ ಚಿಂತನೆಯೊಂದಿಗೆ ಸಾಮಾಜಿಕ ಹೋರಾಟದಿಂದ ಜಾಗೃತಿ ಮಾಡಬೇಕೆಂದರು.
ದಲಿತ ಹಕ್ಕುಗಳ ಹೋರಾಟ ಸಮಿತಿಯ ಸಂಜೀವ ಬಳ್ಕೂರು ಅಂಬೇಡ್ಕರರ ಮೀಸಲಾತಿಯ ಲಾಭ ಪಡೆದ ಬಹುತೇಕ ವಿದ್ಯಾವಂತರು, ದಲಿತ ನೌಕರರು,ಅಧಿಕಾರಿಗಳ,ರಾಜಕಾರಣಿಗಳ ದೊಡ್ಡ ವರ್ಗವಿದ್ದರೂ ದಲಿತ ಸಮಾಜ ವಿಘಟನೆಗೊಂಡಿರುವುದು ಅಂಬೇಡ್ಕರ್‌ಗೆ ಎಸೆದ ದ್ರೋಹ ಎಂದರು.
ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಮಾತನಾಡಿ, ಅಂಬೇಡ್ಕರ್ ಹೆಸರಿನಲ್ಲಿ ಸಂಘಟನೆ ಕಟ್ಟಿಕೊಂಡ ಮಾತ್ರಕ್ಕೆ ಅಂಬೇಡ್ಕರ್‌ವಾದಿಗಳಾಗುವುದಿಲ್ಲ.ಅವರ ತತ್ವ,ಸಿದ್ಧಾಂತವನ್ನು ಕಾಯಾವಾಚಾ ಮನಸಾ ಪ್ರಜ್ಞಾಪೂರ್ವಕವಾಗಿ ಬದುಕಿನ ಭಾಗವಾಗಿ ರೂಪಿಸಿಕೊಳ್ಳಬೇಕು. ಒಬ್ಬ ಮಾನವ ಹಕ್ಕುಗಳ ಹೋರಾಟಗಾರನಾಗಿ ಶೋಷಿತರ ಧ್ವನಿಯಾದ ಅಂಬೇಡ್ಕರ್‌ರನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದರು.
ಅಂಬೇಡ್ಕರ್ ಯುವಸೇನೆಯ ಸ್ಥಾಪಕ ಅಧ್ಯಕ್ಷ ಹರೀಶ್ ಸಾಲ್ಯಾನ್ ಮಾತನಾಡಿ ಸತಿಪದ್ಧತಿ,ದೇವದಾಸಿ ಪದ್ಧತಿ,ವಿಧವಾ ಪದ್ಧತಿ, ಶಿಶುಹತ್ಯೆಗಳಂತಹ ಘೋರ ಕೃತ್ಯಗಳು ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ಧ ಕಟ್ಟುಪಾಡಿನ ವಿರುದ್ಧ ಮತ್ತು ಮಹಿಳೆಯರಿಗೆ ಶಿಕ್ಷಣ ಹಾಗೂ ಆಸ್ತಿಯ ಹಕ್ಕು ನೀಡಿದ ಅಂಬೇಡ್ಕರ್ ಮಹಿಳಾ ವಿಮೋಚನೆಗಾಗಿ ಶ್ರಮಿಸಿದ ನಾಯಕ ಎಂದರು.
ದಲಿತ ಮುಖಂಡರಾದ ಸಂತೋಷ್ ಕಪ್ಪೆಟ್ಟು,ರವಿ ಲಕ್ಷ್ಮೀನಗರ, ಸುಮಿತ್ ನೆರ್ಗಿ,ದಯಾಕರ್ ಮಲ್ಪೆ,ಸಾಧು ಚಿಟ್ಪಾಡಿ,ವಿನಯ ಕೊಡಂಕೂರು, ಜಯ ಸಾಲ್ಯಾನ್,ಪ್ರಸಾದ್ ಮಲ್ಪೆ,ಅನಂತ ಕುಂದರ್ ನೆರ್ಗಿ,ಈಶ್ವರ್ ಗದಗ, ಗುಣವಂತ ತೊಟ್ಟಂ,ಬಿ.ಎನ್.ಪ್ರಶಾಂತ್,ಸುಶೀಲ್ ಕುಮಾರ್,ದೀಪಕ್ ಕೊಡವೂರು,ಮಿಥುನ್ ಲಕ್ಷ್ಮೀನಗರ,ಅರುಣ್ ಸಾಲ್ಯಾನ್,ಮೋಹನ್ ಗುಜ್ಜರಬೆಟ್ಟು,ಶಶಿಕಲಾ ತೊಟ್ಟಂ,ಸಂಕಿ ತೊಟ್ಟಂ,ಶಕಿ ಕಪ್ಪೆಟ್ಟು,ಕಿರಣ,ಸತೀಶ್ ಬೈಲಕೆರೆ,ಹರೀಶ್ ತೊಟ್ಟಂ,ಶಿಕ್ಷಕ ರಕ್ಷಕ ಸಂಘದ ರವಿರಾಜ್,ಅಶೋಕ್ ಕೋಟ್ಯಾನ್, ಮುಖ್ಯೋಪಾಧ್ಯಾಯರಾದ ಪ್ರೇಮಾನಂದ,ಶ್ರೀಮತಿ ವೇದಾವತಿ, ಶ್ರೀಮತಿ ಪೂರ್ಣಿಮ ಮುಂತಾದವರು ಭಾಗವಹಿಸಿದ್ದರು.
ಸುಮಾರು ಐನೂರಕ್ಕೂ ಹೆಚ್ಚು ವಿಧ್ಯಾರ್ಥಿಗಳು ಸಾಲಾಗಿ ಅಂಬೇಡ್ಕರ್ ಭಾವಚಿತ್ರಕ್ಕೆ ಹೂವು ಅರ್ಪಿಸಿ ವಂದಿಸುವ ದ್ರಶ್ಯ ಮನಮೋಹಕವಾಗಿತ್ತು.
ವಾಧಿರಾಜ್ ಪಾಳೆಕಟ್ಟೆ ಸ್ವಾಗತಿಸಿ,ಸತೀಶ್ ಕಪ್ಪೆಟ್ಟ ವಂದಿಸಿದರು.