ಉಡುಪಿ: ದಿನಾಂಕ :06-12-2024(ಹಾಯ್ ಉಡುಪಿ ನ್ಯೂಸ್) ಹಳೆ ತಾಲೂಕು ಕಚೇರಿ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ಅಮಲಿನಲ್ಲಿದ್ದ ಯುವಕನನ್ನು ಉಡುಪಿ ನಗರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ರಮೇಶ್ ವೈ ರವರು ಬಂಧಿಸಿದ್ದಾರೆ.
ಉಡುಪಿ ನಗರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ರಮೇಶ್ ವೈ ರವರು ದಿನಾಂಕ 05/12/2024 ರಂದು ಠಾಣೆಯಲ್ಲಿರುವಾಗ ಉಡುಪಿ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಕರೆ ಮಾಡಿ ಉಡುಪಿ ತಾಲ್ಲೂಕು 76 ಬಡಗುಬೆಟ್ಟು ಗ್ರಾಮದ ಹಳೇ ತಾಲ್ಲೂಕು ಕಚೇರಿ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಓರ್ವ ಯುವಕನು ಗಾಂಜಾದಂತಹ ಮಾದಕ ದ್ರವ್ಯವನ್ನು ಸೇವನೆ ಮಾಡಿ ಅಮಲಿನಲ್ಲಿರುವ ಬಗ್ಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಉಡುಪಿ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿದಾಗ ಆಪಾದಿತ ಶಿಬಿಲ್ ಅಹಮ್ಮದ್ ಎಂಬವನು ಮಾದಕ ದ್ರವ್ಯ ಸೇವನೆ ಮಾಡಿ ಅಮಲಿನಲ್ಲಿರುವುದು ಕಂಡು ಪೊಲೀಸರು ಆತನನ್ನು ಬಂಧಿಸಿ ವಶಕ್ಕೆ ಪಡೆದು ಆತನನ್ನು ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ತಜ್ಞರ ವರದಿಯಲ್ಲಿ ಆಪಾದಿತ ಶಿಬಿಲ್ ಅಹಮ್ಮದ್ ನು ನಿಷೇಧಿತ ಗಾಂಜಾ ಎಂಬ ಮಾದಕ ವಸ್ತುವನ್ನು ಸೇವಿಸಿರುವುದು ಸಾಭೀತಾಗಿರುತ್ತದೆ ಎನ್ನಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 27(ಬಿ) ಎನ್ಡಿಪಿಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.