Spread the love

ಉಡುಪಿ:05-12-2024(ಹಾಯ್ ಉಡುಪಿ ನ್ಯೂಸ್)

ಅತಿ ವೇಗವಾಗಿ ಬಂದ ಕಾರು ಪಲ್ಟಿಯಾಗಿ ರಸ್ತೆ ಬದಿಯಲ್ಲಿ ತಮ್ಮ ದ್ವಿಚಕ್ರ ವಾಹನದಲ್ಲಿ ನಿಂತಿದ್ದ ಹಿರಿಯ ನಾಗರಿಕರಿಗೆ ಡಿಕ್ಕಿಯಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಉಡುಪಿ ಕಡಿಯಾಳಿ ಒಕುಡೆ ಟವರ್ಸ್ ಬಳಿ ಈ ದುರ್ಘಟನೆ ನಡೆದಿದೆ.
ಮಂಗಳೂರು ನೋಂದಣಿಯ ಸ್ವಿಫ್ಟ್ ಕಾರು ಮಣಿಪಾಲದಿಂದ ಉಡುಪಿ ಕಡೆಗೆ ಹೋಗುತ್ತಿತ್ತು.

ವೇಗದಲ್ಲಿದ್ದ ಕಾರು ಚಲಾಯಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ದಿಢೀರ್ ಬ್ರೇಕ್ ಹಾಕಿದ್ದರಿಂದ ಸ್ವಿಫ್ಟ್ ಕಾರು ಪಲ್ಟಿ ಹೊಡೆದಿದೆ.

ರಸ್ತೆ ಬದಿ ತಮ್ಮ ದ್ವಿಚಕ್ರ ವಾಹನದಲ್ಲಿ ನಿಂತಿದ್ದ ವೃದ್ದರಿಗೆ ಮತ್ತು ಮತ್ತೊಂದು ಕಾರಿಗೆ ಪಲ್ಟಿಯಾದ ಕಾರು ಡಿಕ್ಕಿಯಾಗಿದೆ.

error: No Copying!