ಮಲ್ಪೆ: ದಿನಾಂಕ: 05-12-2024(ಹಾಯ್ ಉಡುಪಿ ನ್ಯೂಸ್) ಬೋಟ್ ಒಂದರಲ್ಲಿ ಕಮಿಷನ್ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ ಕೆಲಸಗಾರನೋರ್ವರಿಗೆ ಬೋಟಿನ ಮಾಲಕ ಕಮಿಷನ್ ಹಣ ನೀಡದೆ ಮೋಸ ಮಾಡಿದ್ದಾನೆ ಎಂದು ಶೇಖರ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಉಡುಪಿ ಕೊಡವೂರು ಗ್ರಾಮದ ನಿವಾಸಿ ಶೇಖರ್ (60) ಎಂಬವರು ಮೀನುಗಾರಿಕಾ ಉದ್ಯೋಗ ಮಾಡುವವರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿ ಮುಕ್ತಾರ್ ಅಹಮದ್ ಎಂಬವನು ಮಲ್ಪೆಯಲ್ಲಿ RC NO IND=KA-02-MM 912 ಎಂಬ ನೊಂದಣಿ ನಂಬ್ರದ ರಾಜಾ ರಕ್ಷಾ ಎಂಬ ಬೋಟಿನ ಮಾಲಕನಾಗಿದ್ದಾನೆ ಎಂದೂ ಇನ್ನೋರ್ವ ಆರೋಪಿ ಸಂತೋಷ್ ಎಂಬವನು ಈ ಬೋಟಿನಲ್ಲಿ ಮೀನಿನ ಲೆಕ್ಕಾಚಾರ ಮಾಡುವ ಕೆಲಸ ಮಾಡಿಕೊಂಡಿರುತ್ತಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಶೇಖರರವರು ಮುಕ್ತಾರ್ ಅಹಮದ್ ನಿಂದ ಕಮಿಷನ್ ಆಧಾರದಲ್ಲಿ, ಬಾಯ್ದೆರೆ ಒಪ್ಪಂದ ಮೂಲಕ ರಾಜಾರಕ್ಷಾ ಬೋಟ್ ನಲ್ಲಿ ಒಂದು ಬಾರಿಗೆ ಬೋಟ್‌ನಲ್ಲಿ ಮೀನುಗಾರಿಕೆ ಹೋಗಿ ಬಂದಾಗ ಬೋಟಿನ ಎಲ್ಲಾ ಖರ್ಚು ವೆಚ್ಚ ಗಳನ್ನು ಕಳೆದು ಶೇಖರರವರಿಗೆ ಶೇಕಡಾ 9 ಕಮಿಷನ್ ಹಣವನ್ನು ಆರೋಪಿಗಳು ಕೊಡಬೇಕೇಂದು ಶೇಖರರವರು ಗುತ್ತಿಗೆ ಪಡೆದುಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅದರಂತೆ ಮುಕ್ತಾರ್ ಅಹಮದ್ ನು ಶೇಖರರವರಿಗೆ ಒಂದೆರಡು ಬಾರಿ ಕಮಿಷನ್ ಹಣ ನೀಡಿ ನಂತರದಲ್ಲಿ ಹಣವನ್ನು ಕೊಡದೇ ಸತಾಯಿಸಿರುತ್ತಾನೆ ಎಂದು ದೂರಿದ್ದಾರೆ. ಅಲ್ಲದೇ ಶೇಖರರವರು ರಾಜಾರಕ್ಷಾ ಬೋಟ್ ನಲ್ಲಿ ಇರಿಸಿದ್ದ ಮೀನುಗಾರಿಕಾ ಬಲೆಯನ್ನು ಕೂಡಾ ಆರೋಪಿಗಳು ಕಳ್ಳತನ ಮಾಡಿ ಮಾರಾಟ ಮಾಡಿದ್ದಾರೆ ಎಂದು ದೂರಿದ್ದಾರೆ.
ಶೇಖರ್ ರವರು ಮೀನುಗಾರಿಕಾ ಕೆಲಸಗಾರರು ಉಳಿದುಕೊಳ್ಳಲು ಮಲ್ಪೆಯ ಹರಿಯಪ್ಪ ಕೋಟ್ಯಾನ್‌ರವರ ಕಾರ್ತಿಕ ಕಟ್ಟಡದಲ್ಲಿನ ಕೋಣೆಗಳಿಗೆ ಭದ್ರತಾ ಠೇವಣಿಯಾಗಿ ನೀಡಿದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇದರ ಖಾಲಿ ಚೆಕ್ ಅನ್ನು ಹರಿಯಪ್ಪ ಕೋಟ್ಯಾನ್ ರವರಿಗೆ ಬಾಡಿಗೆ ಬಗ್ಗೆ ನೀಡಿದ್ದು, ಚೆಕ್ ಅನ್ನು ವಾಪಾಸು ಶೇಖರರವರಿಗೂ ನೀಡದೇ ಆರೋಪಿಗಳು ತಾವೇ ಇರಿಸಿಕೊಂಡಿದ್ದು, ಈ ಬಗ್ಗೆ ಶೇಖರರವರು ಆರೋಪಿಗಳ ಬಳಿ ತನಗೆ ಬಾಕಿ ಬರಬೇಕಾದ ಕಮಿಷನ್ ಹಣ ಮತ್ತು ಚೆಕ್ ಅನ್ನು ವಾಪಾಸು ನೀಡಲು ಕೇಳಿಕೊಂಡಾಗ ಆರೋಪಿಗಳು ಜೀವ ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿಗಳು ಶೇಖರರವರಿಗೆ ಕೊಡಬೇಕಾದ ಹಣವನ್ನು ಕೊಡದೇ ಭದ್ರತೆಯಾಗಿ ನೀಡಿದ ಖಾಲಿ ಚೆಕ್ ಅನ್ನೂ ಹಿಂತಿರುಗಿಸದೇ ಮೋಸ ಮಾಡಿ, ಬೋಟ್‌ನಲ್ಲಿದ್ದ ಮೀನುಗಾರಿಕಾ ಬಲೆಯನ್ನು ಕಳ್ಳತನ ಮಾಡಿ ಮಾರಾಟ ಮಾಡಿ ನಷ್ಟ ಉಂಟು ಮಾಡಿದ್ದಾರೆ ಎಂದು ನ್ಯಾಯಾಲಯದಲ್ಲಿ ನೀಡಿದ ಖಾಸಗಿ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ: 316(2),318(2),(3),303,351(3) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.