Spread the love

ಕಾರ್ಕಳ: ದಿನಾಂಕ:05-12-2024( ಹಾಯ್ ಉಡುಪಿ ನ್ಯೂಸ್) ಪೊಲೀಸರ ಕಣ್ಣು ತಪ್ಪಿಸಿ ಮರಳು ಕಳ್ಳ ಸಾಗಾಣಿಕೆ ನಡೆಸುತ್ತಿದ್ದ ಟಿಪ್ಪರ್ ವಾಹನ ಅತಿಯಾದ ವೇಗದ ಚಾಲನೆ ಯಿಂದಾಗಿ ಅಪಘಾತಕ್ಕೀಡಾದ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿನಾಂಕ 03/12/2024 ರಂದು ಟಿಪ್ಪರ್ ನಂಬ್ರ KL-25-D-1078 ನೇಯದರ ಚಾಲಕ, ಅದರ ಮಾಲಕ ಮತ್ತು ಕ್ಲೀನರ್ ಇವರುಗಳು ಸೇರಿಕೊಂಡು ಮರಳನ್ನು ಸಾಗಾಟ ಮಾಡುವ ಬಗ್ಗೆ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆದುಕೊಳ್ಳದೇ ಟಿಪ್ಪರಿನಲ್ಲಿ 2 ಯುನಿಟ್ ಮರಳನ್ನು ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ಬೆಳುವಾಯಿ ಕಡೆಯಿಂದ ರೆಂಜಾಳ ಮಾರ್ಗವಾಗಿ ಕಾರ್ಕಳ ಕಡೆಗೆ ಅತೀವೇಗವಾಗಿ ಚಲಾಯಿಸಿಕೊಂಡು ಬರುವಾಗ ರೆಂಜಾಳ ಗ್ರಾಮದ ಪೆರಾಲ್ದಬೆಟ್ಟು ಕ್ರಾಸ್ ಬಸ್ಸು ನಿಲ್ದಾಣ ಬಳಿ ತಿರುವಿನಲ್ಲಿ ರಾತ್ರಿ  ಅಪಘಾತಕ್ಕೀಡಾಗಿದೆ ಎಂದು ದೂರು ದಾಖಲಾಗಿದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  ಕಲಂ: 303(2), 281, 112(1) , R/w 3(5) ಭಾರತೀಯ ನ್ಯಾಯ ಸಂಹಿತೆ 2023 ಮತ್ತು U/s. 66 r/w 192(A) IMV ACT ಕಲಂ: 4(1-A), 21(4) Mines and Minerals Regulation Act 1957 ರಂತೆ ಪ್ರಕರಣ ದಾಖಲಾಗಿದೆ.

error: No Copying!