Spread the love

ಉಡುಪಿ: ದಿನಾಂಕ:05-12-2024(ಹಾಯ್ ಉಡುಪಿ ನ್ಯೂಸ್) ಅಪರಾಧಗಳನ್ನು ತಡೆಗಟ್ಟಲು ಮುಂಜಾಗ್ರತ ಕ್ರಮವಾಗಿ ಉಡುಪಿ ನಗರ ಪೊಲೀಸರಿಂದ ಉಡುಪಿ ನಗರದಲ್ಲಿ ರಾತ್ರಿ ಕಾರ್ಯಾಚರಣೆ ನಡೆಸಲಾಗಿದೆ

ಉಡುಪಿ ನಗರದ ಸಿಟಿ ಬಸ್ ನಿಲ್ದಾಣದಲ್ಲಿ ಹಾಗೂ ಕರಾವಳಿ ಬೈಪಾಸ್ ಬಳಿಯ ಶಾರದಾ ಹೋಟೆಲ್ ನಿಂದ ಕಾಂಚನ್ ಹುಂಡೈ ಶೋರೂಂ ವರೆಗಿನ ರಸ್ತೆ ಬದಿಗಳಲ್ಲಿ ರಾತ್ರಿ ವೈಶ್ಯಾವಾಟಿಕೆ ವ್ರತ್ತಿ ನಡೆಯುತ್ತಿರುವ ಬಗ್ಗೆ ಹಾಯ್ ಉಡುಪಿ ಪತ್ರಿಕೆ ವರದಿ ಮಾಡಿತ್ತು.

ಇದೀಗ ಪೊಲೀಸ್ ಇಲಾಖೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಸೂಚನೆ ಯಂತೆ ರಾತ್ರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.ಪೊಲೀಸರಿಂದ ನಡೆಯುತ್ತಿರುವ ರಾತ್ರಿ ಕಾರ್ಯಾಚರಣೆಗೆ ಜನರ ಮೆಚ್ಚುಗೆ ವ್ಯಕ್ತವಾಗಿದ್ದು ಈ ಕಾರ್ಯಾಚರಣೆ ನಿರಂತರವಾಗಲಿ ಎಂದು ಆಶಿಸಿದ್ದಾರೆ.

ಸಿಟಿ ಬಸ್ ನಿಲ್ದಾಣದ ಐರೋಡಿ ವ್ರತ್ತ ದ ಮರದ ಕೆಳಗೆ ಇದೀಗಲೂ ಒಬ್ಬಂಟಿಯಾಗಿ ನಿಂತು ಮಹಿಳೆಯೋರ್ವಳು ರಾತ್ರಿ ಹೊತ್ತು ಪೊಲೀಸರ ಕಣ್ಣು ತಪ್ಪಿಸಿ ನಿಂತು ವೈಶ್ಯಾವಾಟಿಕೆ ನಡೆಸುತ್ತಿದ್ದಾಳೆ ಎಂದು ಸ್ಥಳೀಯರು ದೂರಿ ಕೊಂಡಿದ್ದಾರೆ. ಉಡುಪಿ ನಗರ ಪೊಲೀಸರು ಐರೋಡಿ ವ್ರತ್ತ ದ ಕಡೆಗೆ ಗಮನಹರಿಸಿ ಈ ಸಾರ್ವಜನಿಕ ಮೈ ಮಾರುವ ದಂಧೆ ಗೆ ಸಂಪೂರ್ಣ ವಿರಾಮ ಹಾಕುವ ಮೂಲಕ ಧಾರ್ಮಿಕ ನಗರ ಉಡುಪಿಯ ಮಾನ ಕಾಪಾಡ ಬೇಕಾಗಿದೆ.

error: No Copying!