Spread the love

ಕುಂದಾಪುರ: ದಿನಾಂಕ:02-12-2024(ಹಾಯ್ ಉಡುಪಿ ನ್ಯೂಸ್)

ಸ್ನೇಹಿತರೊಂದಿಗೆ ಡ್ಯಾಮ್ನಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೆಳ್ವೆ ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕರನ್ನು ಗೋಳಿಯಂಗಡಿ ಜ್ಯುವೆಲ್ಲರ್ಸ್ ವೊಂದರ ಮಾಲೀಕ ಶ್ರೀಧರ ಆಚಾರ್ಯ ಅವರ ಪುತ್ರ 13 ವರ್ಷದ ಶ್ರೀಶ(8ನೇ ತರಗತಿ) ಹಾಗೂ ರಾಮ ನಾಯ್ಕ ಅವರ ಪುತ್ರ 19 ವರ್ಷದ ಜಯಂತ್‌ ಎಂದು ಗುರುತಿಸಲಾಗಿದೆ.

ಶಾಲೆಗೆ ರಜೆ ಹಿನ್ನೆಲೆಯಲ್ಲಿ ಈ ಇಬ್ಬರು ಬಾಲಕರು ಸ್ನೇಹಿತರೊಂದಿಗೆ ಈಜಲು ಹೋಗಿದ್ದಾಗ ಈ ಅವಘಡ ಸಂಭವಿಸಿದೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: No Copying!