ಕಾರ್ಕಳ: ದಿನಾಂಕ: 01-12-2024(ಹಾಯ್ ಉಡುಪಿ ನ್ಯೂಸ್) ಬೆಳ್ಮಣ್ ಚರ್ಚ್ ಬಳಿ ಕೋಳಿ ಹುಂಜ ಸಾಕಾಣಿಕೆ ಮಾಡುತ್ತಿದ್ದ ಶೆಡ್ ನಿಂದ ಕೋಳಿ ಹುಂಜ ಗಳನ್ನು ಕಳ್ಳತನ ನಡೆಸಿದ್ದಾರೆ ಎಂದು ಉದಯ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕಾರ್ಕಳ ಇನ್ನಾ ಗ್ರಾಮದ ನಿವಾಸಿ ಉದಯ (53) ಎಂಬವರು ಬೆಳ್ಮಣ್ ಗ್ರಾಮದ ಚರ್ಚ್ ಬಳಿ ದಿವಾಕರ ಎಂಬವರ ಜಾಗದಲ್ಲಿ ಶೆಡ್ ಮಾಡಿ ಮಾರಾಟ ಮಾಡುವ ಕೋಳಿ ಹುಂಜಗಳನ್ನು ಸಾಕುತ್ತಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ದಿನಾಂಕ 26/11/2024 ರಂದು ಸಂಜೆ ಕೋಳಿಗಳನ್ನು ಕಬ್ಬಿಣದ ಗೂಡಿನಲ್ಲಿ ಹಾಕಿ ಮನೆಗೆ ಹೋಗಿದ್ದು ದಿನಾಂಕ 27/11/2024 ರಂದು ಬೆಳಿಗ್ಗೆ ಬಂದು ನೋಡಿದಾಗ 21 ಕೋಳಿಗಳ ಪೈಕಿ 10 ಹುಂಜ ಕೋಳಿಗಳನ್ನು ಶೆಡ್‌ನ ಮೇಲಿನ ಶೀಟ್‌ನ ಹುಕ್ ಅನ್ನು ಯಾರೋ ಕಳ್ಳರು ಬಿಚ್ಚಿ ಶೀಟನ್ನು ಸರಿಸಿ ಶೆಡ್‌ನ ಒಳಪ್ರವೇಶಿಸಿ ರೂಪಾಯಿ 30,000/ ಮೌಲ್ಯದ 10 ಹುಂಜಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 305, 331(3) 331(4) BNS ರಂತೆ ಪ್ರಕರಣ ದಾಖಲಾಗಿದೆ.