ಉಡುಪಿ: ದಿನಾಂಕ:01-12-2024(ಹಾಯ್ ಉಡುಪಿ ನ್ಯೂಸ್) ಶಿವಳ್ಳಿ ಗ್ರಾಮದ ವ್ಯಕ್ತಿ ಯೋರ್ವರ ಬ್ಯಾಂಕ್ ಖಾತೆಯಿಂದ 3.9 ಲಕ್ಷ ರೂಪಾಯಿ ಹಣವನ್ನು ವಂಚನೆಯಿಂದ ಯಾರೋ ವರ್ಗಾವಣೆ ಮಾಡಿ ಕೊಂಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಉಡುಪಿ ಶಿವಳ್ಳಿ ಗ್ರಾಮದ ನಿವಾಸಿ ಕೆ ಜಯರಾಮ (69) ಎಂಬವರ ವಾಟ್ಸ ಆಪ್ ಗೆ ದಿನಾಂಕ 28/11/2024 ರಂದು ಒಂದು APK File ಬಂದಿದ್ದು ಕೆ ಜಯರಾಮ ರವರು ಅದನ್ನು ಒತ್ತಿದ ತಕ್ಷಣ ಕೆ ಜಯರಾಮ ಅವರ ಯೂನಿಯನ್ ಬ್ಯಾಂಕ್ ಎಸ್ ಬಿ ಬೇರೆ ಬೇರೆ ಖಾತೆ ಯಲ್ಲಿರುವ ಒಟ್ಟು 3,83,800 ರೂಪಾಯಿಯನ್ನು ಆರೋಪಿಯು ತನ್ನ ಅಕೌಂಟ್ ಗೆ ವರ್ಗಾವಣೆ ಮಾಡಿಕೊಂಡಿದ್ದು, ವರ್ಗಾವಣೆಗೊಂಡ ಬಗ್ಗೆ ರಾತ್ರಿ ಮೇಸೆಜ್ ಬಂದಿರುತ್ತದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಕೆ ಜಯರಾಮ ಅವರಿಗೆ ಅಪರಿಚಿತರು ಮೋಸ, ವಂಚನೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ: 66 D IT ACT & 318(2) ಬಿಎನ್ಎಸ್ ರಂತೆ ಪ್ರಕರಣ ದಾಖಲಾಗಿದೆ.