- ಉಡುಪಿ: ದಿನಾಂಕ: 30-11-2024(ಹಾಯ್ ಉಡುಪಿ ನ್ಯೂಸ್) ಅಪರಿಚಿತರು ವಾಟ್ಸಪ್ ಗ್ರೂಫ್ ನಲ್ಲಿ ಶೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭಾಂಶದ ಆಸೆ ತೋರಿಸಿ ನವೀನ್ ಎಂಬವರಿಗೆ ಇಪ್ಪತ್ತು ಲಕ್ಷ ರೂಪಾಯಿಗೂ ಹೆಚ್ಚಿನ ವಂಚನೆ ನಡೆಸಿರುವ ಬಗ್ಗೆ ದೂರು ದಾಖಲಾಗಿದೆ.
- ಕುಂದಾಪುರ ಅಂಕದಕಟ್ಟೆ ಗ್ರಾಮದ ನಿವಾಸಿ ನವೀನ್ (52) ಎಂಬವರ ಮೊಬೈಲ್ ನಂಬ್ರವನ್ನು ಯಾರೋ ಅಪರಿಚಿತರು Center IPO Industry Focus ಎಂಬ WhatsApp ಗ್ರೂಪ್‌ಗೆ ಸೇರಿಸಿದ್ದು ಶೇರು ಮಾರುಕಟ್ಟೆಯ ಬಗ್ಗೆ ಹಾಗೂ ಲಾಭಾಂಶಗಳ ಬಗ್ಗೆ ಮಾಹಿತಿ ತಿಳಿಸಿ ನವೀನ್ ಅವರನ್ನು ನಂಬಿಸಿ, ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ, ಹಣವನ್ನು ಹೂಡಿಕೆ ಮಾಡಲು ತಿಳಿಸಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
- ಇದನ್ನು ನಂಬಿದ ನವೀನ್ ರವರು ಅಪರಿಚಿತರು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ದಿನಾಂಕ:03/11/2024 ರಿಂದ ದಿನಾಂಕ:12/11/2024 ರ ತನಕ ಹಂತ ಹಂತವಾಗಿ ಒಟ್ಟು 20,20,000/- ಹಣವನ್ನು ಹೂಡಿಕೆ ಮಾಡಿದ್ದು ತದನಂತರ ನವೀನ್ ರವರು ಹೂಡಿಕೆ ಮಾಡಿದ ಹಣವನ್ನಾಗಲಿ ಅಥವಾ ಲಾಭಾಂಶವನ್ನಾಗಲಿ ಈವರೆಗೆ ನೀಡದೇ ನಂಬಿಸಿ, ಮೋಸದಿಂದ ನಷ್ಟ ಉಂಟು ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
- ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಕಲಂ: 66 (ಸಿ) 66 (ಡಿ) ಐ.ಟಿ. ಆಕ್ಟ್. 318(4) BNS ರಂತೆ ಪ್ರಕರಣ ದಾಖಲಾಗಿದೆ.