Spread the love

ಹೆಬ್ರಿ: ದಿನಾಂಕ: 29-11-2024 (ಹಾಯ್ ಉಡುಪಿ ನ್ಯೂಸ್) ಕಟ್ಟೆಜೆಡ್ಡು ಎಂಬಲ್ಲಿನ ಮಾತಿಬೆಟ್ಟು ಹೊಳೆಯ ದಡದಲ್ಲಿ ಮರಳು ಕಳ್ಳತನ ನಡೆಸುತ್ತಿದ್ದ ವ್ಯಕ್ತಿ ಗಳ ಮೇಲೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿನಾಂಕ 27/11/2024 ರಂದು ಬೆಳಿಗ್ಗೆ ವರಂಗ ಗ್ರಾಮದ ಕಟ್ಟೆ ಜೆಡ್ಡು ಎಂಬಲ್ಲಿನ ಕಟ್ಟೆ ಜೆಡ್ಡು ಪ್ರೇಮ ಎಂಬವರ ಅಡಿಕೆ ತೋಟದ ಪಕ್ಕದ ಮಾತಿಬೆಟ್ಟು ಹೊಳೆಯ ದಡದಲ್ಲಿ ಓರ್ವ ವ್ಯಕ್ತಿ ಮರಳು ರಾಶಿ ಹಾಕುತ್ತಿದ್ದು ಹಾಗೂ ಇನ್ನೊಬ್ಬ ವ್ಯಕ್ತಿ ಪಕ್ಕದ ತೋಟದಲ್ಲಿ ನಿಂತುಕೊಂಡಿದ್ದು ದೂರದಲ್ಲಿ ಬರುತ್ತಿದ್ದ  ಹೆಬ್ರಿ ಪೊಲೀಸ್ ಠಾಣೆಯ ಹೆಡ್‌ ಕಾನ್ಸಟೇಬಲ್‌ ಜೀವನ್ ಕುಮಾರ್ ಸಿ ಅವರನ್ನು ನೋಡಿದ ಮರಳನ್ನು ರಾಶಿ ಹಾಕುತ್ತಿದ್ದ ವ್ಯಕ್ತಿ ಅಲ್ಲಿಂದ ಓಡಿ ಹೋಗಿದ್ದು ಅಲ್ಲಿಯೇ ಇದ್ದ ಸತೀಶ ಎಂಬವನಲ್ಲಿ ಹೆಚ್.ಸಿ ಜೀವನ್ ಕುಮಾರ್ ಅವರು ವಿಚಾರಿಸಿದಾಗ ಮರಳನ್ನು ವರಂಗ ಗ್ರಾಮದ ಪಡುಬೆಟ್ಟು ನಿವಾಸಿ ಪ್ರಭಾಕರ ರವರು ಮಾತಿಬೆಟ್ಟು ನದಿಯಿಂದ ಕೆಲಸಗಾರರ ಸಹಾಯದಿಂದ ಮರಳನ್ನು ಸಾಗಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿ ಇಟ್ಟಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.

ಪೊಲೀಸರು ಸಂಬಂದಿಸಿದ ವರಂಗ ಪಂಚಾಯತ್‌ನಲ್ಲಿ ವಿಚಾರಿಸಿದಾಗ ಪರವಾನಗಿ ಇಲ್ಲದೆ ಇರುವ ಬಗ್ಗೆ ಖಚಿತಪಡಿಸಿಕೊಂಡಿದ್ದು ಸ್ಥಳದಲ್ಲಿ 3 ಯುನಿಟ್‌ನಷ್ಟು ಮರಳು ರಾಶಿ ಇದ್ದು ಯಾವುದೇ ಪರವಾನಿಗೆಯನ್ನು ಪಡೆಯದೇ ಲಾಭದ ಉದ್ದೇಶದಿಂದ ಅಕ್ರಮವಾಗಿ ಮರಳನ್ನು ತೆಗೆದು ಸಾಗಾಟ ಮಾಡುವ ಬಗ್ಗೆ ಸಂಗ್ರಹಿಸಿಟ್ಟಿದ್ಧಾರೆ ಎಂದು ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಕಲಂ: 303(2)BNS ಮತ್ತು 4(1A),21(4) MMRD ACT ರಂತೆ ಪ್ರಕರಣ ದಾಖಲಾಗಿದೆ.

error: No Copying!