Spread the love

ಕೋಟ: ದಿನಾಂಕ: 29-11-2024(ಹಾಯ್ ಉಡುಪಿ ನ್ಯೂಸ್) ಕೋಟತಟ್ಟು ಗ್ರಾಮದ ಪಡುಕೆರೆ ಯಲ್ಲಿ ಸಮುದ್ರದ ಮರಳು ಕಳ್ಳತನ ನಡೆಸುತ್ತಿದ್ದಲ್ಲಿಗೆ ಕೋಟ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸುಧಾ ಪ್ರಭು ಅವರು ದಾಳಿ ನಡೆಸಿ ಟಿಪ್ಪರ್ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ

ಕೋಟ ಪೊಲಿಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಸುಧಾ ಪ್ರಭು ಅವರಿಗೆ ದಿನಾಂಕ 27/11/2024 ರಂದು ಬೆಳಿಗ್ಗೆ ಬ್ರಹ್ಮಾವರ ತಾಲ್ಲೂಕು ಕೋಟತಟ್ಟು ಗ್ರಾಮದ ಪಡುಕೆರೆಯ ಜನನಿ ಕಾಂಪ್ಲೇಕ್ಸ್‌ ಹತ್ತಿರ ಇರುವ ಮಂಜುನಾಥ ಎಂಬವರ ಮನೆಯ ಹಿಂಭಾಗದಲ್ಲಿ ಸಮುದ್ರದ ಮರಳನ್ನು ಅಕ್ರಮ ವಾಗಿ ತೆಗೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದ ಮೇರೆಗೆ ಕೂಡಲೇ ಠಾಣೆಯ ಸಿಬ್ಬಂದಿಯವರನ್ನು ಕರೆದುಕೊಂಡು ಸ್ಥಳಕ್ಕೆ ದಾಳಿ ನಡೆಸಿದ್ದಾರೆ.

ಅಲ್ಲಿ 3 ಟನ್ ಗಳಷ್ಟು ಸಮುದ್ರದ ಮರಳು ತುಂಬಿದ KA-20-AC-4263 ನೇ ನೊಂದಣಿ ನಂಬ್ರದ 407 ಟಿಪ್ಪರ್ ನಿಂತಿದ್ದು ಟಿಪ್ಪರ್ ಚಾಲಕನ ಬಳಿ ಪೊಲೀಸರು ವಿಚಾರಿಸಿದಾಗ ಮರಳನ್ನು ತೆಗೆಯಲು ಪರವಾನಿಗೆ ಇಲ್ಲದೇ ಇರುವುದರಿಂದ ಹಾಗೂ ಸಮುದ್ರದ ಮರಳನ್ನು ಕಳ್ಳತನ ಮಾಡಿಕೊಂಡು ಬೇಳೂರು ಗ್ರಾಮದ ಗುಳ್ಳಾಡಿಯಲ್ಲಿರುವ ಮಹೇಂದ್ರ ಹಾಗೂ ಅವರ ಮ್ಯಾನೇಜರ್ ಪಾಂಡುರಂಗ ತಿಳಿಸಿದಂತೆ ಅವರ ಗುಳ್ಳಾಡಿಯಲ್ಲಿರುವ ಕೋಸ್ಟಲ್‌ ಮಿನರಲ್ಸ್‌ ಪ್ಯಾಕ್ಟರಿಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕಲಂ: 303(2) ಜೊತೆಗೆ 3(5)BNS & 4, 4(1A), 21 MMRD Act ರಂತೆ ಪ್ರಕರಣ ದಾಖಲಾಗಿದೆ.

error: No Copying!