ಉಡುಪಿ: ದಿನಾಂಕ:27-11-2024 (ಹಾಯ್ ಉಡುಪಿ ನ್ಯೂಸ್) ಮಹಿಳೆಯೋರ್ವರಿಗೆ ಮುಂಬೈ ಪೊಲೀಸ್ ಅಧಿಕಾರಿ ಎಂದು ನಂಬಿಸಿ 19.7 ಲಕ್ಷ ರೂಪಾಯಿ ವಂಚನೆ ನಡೆಸಿರುವ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ವಿದ್ಯಾ (53) ಎಂಬವರಿಗೆ ದಿನಾಂಕ 04/10/2024 ರಂದು ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ ನಾವು ಏರ್‌ಟೆಲ್ ಕಂಪೆನಿಯಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ ನಿಮ್ಮ ಆಧಾರ್ ನಂಬ್ರದಿಂದ ಮುಂಬೈನಲ್ಲಿ ಯಾರೋ ಸಿಮ್ ಖರೀದಿ ಮಾಡಿ ಅದರಲ್ಲಿ ಸ್ಪ್ಯಾಮ್ ಮೆಸೇಜ್ ಮತ್ತು ಟ್ರೇಡಿಂಗ್ ಮೆಸೇಜ್ ಕಳುಹಿಸುತ್ತಿದ್ದು ಆದ್ದರಿಂದ ನಿಮ್ಮ ಎಲ್ಲಾ ಮೊಬೈಲ್ ನಂಬ್ರ ಬ್ಲಾಕ್ ಮಾಡಲಾಗುವುದು ಎಂಬುದಾಗಿ ತಿಳಿಸಿ ಕರೆಯನ್ನು ಸಹರಾ ಪೊಲೀಸ್ ಠಾಣೆಗೆ ಕಾಲ್ ಕನೆಕ್ಟ್ ಮಾಡುತ್ತಿರುವುದಾಗಿ ತಿಳಿಸಿರುತ್ತಾರೆ ಎಂದು ವಿದ್ಯಾ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಆ ನಂತರ ಮೋಹನ್ ಕುಮಾರ್ ಎಂಬುವವನು ತಾನು ಸಹರಾ ಪೊಲೀಸ್ ಠಾಣೆಯಲ್ಲಿ ಇನ್‌ವೆಸ್ಟಿಗೇಶನ್ ಮಾಡುವ ಅಧಿಕಾರಿ ಎಂಬುದಾಗಿ ತಿಳಿಸಿ ನಿಮ್ಮ ಆಧಾರ್ ಕಾರ್ಡ್ ನ ಮುಖಾಂತರ ಮುಂಬೈ ಎಸ್‌ಬಿಐ ಬ್ಯಾಂಕ್ ನಲ್ಲಿ ಖಾತೆ ತೆರೆದಿದ್ದು ಖಾತೆಯನ್ನು ವಿವೇಕ್‌ದಾಸ್ ಎಂಬುವವರು ಆಪರೇಟ್ ಮಾಡಿ ಆ ಖಾತೆಗೆ Human Trafficking ಮತ್ತು Money Laundering ಮುಖಾಂತರ ಹಣವನ್ನು ವರ್ಗಾವಣೆ ಮಾಡಿರುತ್ತಾರೆ ಎಂದು ತಿಳಿಸಿದ್ದಾನೆ ಆದ್ದರಿಂದ ಖಾತೆ ನಿಮ್ಮ ಹೆಸರಿನಲ್ಲಿ ಇರುವುದರಿಂದ ನಿಮ್ಮ ಎಲ್ಲಾ ಅಕೌಂಟ್ ಪರಿಶೀಲನೆ ಮಾಡಬೇಕಾಗಿರುವುದಾಗಿ ತಿಳಿಸಿರುತ್ತಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ
ದಿನಾಂಕ 05/10/2024 ರಂದು ಪುನಃ ಮೋಹನ್ ಕುಮಾರ್ ಪೊಲೀಸ್ ಅಧಿಕಾರಿ ಎಂಬುದಾಗಿ ಹೇಳಿಕೊಂಡು ವಿದ್ಯಾರವರಿಗೆ ಕರೆ ಮಾಡಿ ನೀವು ಕೂಡ ಪ್ರಕರಣದಲ್ಲಿ ಅರೆಸ್ಟ್ ಆಗಿರುತ್ತೀರಿ ನೀವು ಎಲ್ಲಿಗೂ ಹೋಗುವಂತಿಲ್ಲ, ಎಲ್ಲಿಗೆ ಹೋಗುವುದಿದ್ದರೂ ನಮಗೆ ತಿಳಿಸಬೇಕು ಎಂಬುದಾಗಿ ಬೆದರಿಸಿ ನಿಮ್ಮ ಎಲ್ಲಾ ಅಕೌಂಟ್ ಪ್ರೀಜ್ ಆಗುತ್ತದೆ. ಆದ್ದರಿಂದ ನಿಮ್ಮ ಅಕೌಂಟ್‌ನಲ್ಲಿ ಇದ್ದ ಹಣವನ್ನು ತಾನು ಹೇಳಿದ UPI ನಂಬ್ರಕ್ಕೆ ಹಾಗೂ ಬ್ಯಾಂಕ್ ಖಾತೆಗೆ ಕಳುಹಿಸಲು ತಿಳಿಸಿದ್ದು ಅದರಂತೆ ವಿದ್ಯಾರವರು ದಿನಾಂಕ 16/10/2024 ರಿಂದ ದಿನಾಂಕ 07/11/2024 ರ ತನಕ ಹಂತ ಹಂತವಾಗಿ ಒಟ್ಟು 19,71,679/- ಹಣವನ್ನು ವರ್ಗಾಯಿಸಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ .
ಅವರು ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ: 66 (ಸಿ), 66 (ಡಿ) ಐಟಿ. ಆಕ್ಟ್. ಮತ್ತು ಕಲಂ 308(6), 318(4) BNS ರಂತೆ ಪ್ರಕರಣ ದಾಖಲಾಗಿದೆ.