Spread the love

ಉಡುಪಿ: ದಿನಾಂಕ:24-11-2024(ಹಾಯ್ ಉಡುಪಿ ನ್ಯೂಸ್) ಕುಂದಾಪುರ ನಿವಾಸಿ ಯೋರ್ವರಿಗೆ ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ 47ಲಕ್ಷ ರೂಪಾಯಿ ವಂಚನೆ ನಡೆಸಿರುವ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕುಂದಾಪುರ ,ಬಿದ್ಕಲ್ ಕಟ್ಟೆ ನಿವಾಸಿ ಅವಿನಾಶ್ (48) ಎಂಬವರನ್ನು ಯಾರೋ ಅಪರಿಚಿತರು  ದಿನಾಂಕ 17/09/2024 ರಂದು ಅವರ ಮೊಬೈಲ್ ಗೆ “Surendra VIP free bull stock Sharing Group-X98” ಎಂಬ ವಾಟ್ಸಪ್ ಗ್ರೂಪ್‌ಗೆ 7005841479 ನೇ ಮೊಬೈಲ್ ನಂಬ್ರನಿಂದ ಸೇರ್ಪಡೆ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಅದರಲ್ಲಿ ಷೇರು ಮಾರ್ಕೇಟ್ ನಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭಂಶ ಪಡೆಯುವಂತೆ ತಿಳಿಸಿದಂತೆ, ಅವಿನಾಶ್ ಅವರು ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಅವರು ತಿಳಿಸಿದಂತೆ Zerodha ಎಂಬ D-mat account ಖಾತೆ ತೆರೆದಿದ್ದು, ಅದರಲ್ಲಿ10,000/- ಹೂಡಿಕೆ ಮಾಡಿದ್ದು, ಬಳಿಕ EMCEE – invest Group Inc ಎಂಬ D-mat account ನಲ್ಲಿ ಹೂಡಿಕೆ ಮಾಡುವಂತೆ ತಿಳಿಸಿದಂತೆ ಅವಿನಾಶ್ ಅವರು ಅವರ ಬ್ಯಾಂಕ್ ಆಫ್ ಬರೋಡಾ ಖಾತೆ ನಂಬ್ರ 74020100004725 ನಿಂದ ಗೂಗಲ್ ಪೇ ಮತ್ತು ಆನ್‌ಲೈನ್‌ ಇಂಟರ್‌ ನೆಟ್ ಬ್ಯಾಂಕಿಂಗ್ ಮುಖಾಂತರ ಯಾರೋ ಅಪರಿಚಿತರು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ರೂ. 46,92,000/- ಜಮೆ ಮಾಡಿಸಿಕೊಂಡು ಈವರೆಗೆ ಅವಿನಾಶ್ ಅವರು ಜಮೆ ಮಾಡಿದ ಹಣವನ್ನು ವಾಪಾಸು ನೀಡದೇ, ಲಾಭಾಂಶವನ್ನೂ ಕೊಡದೇ ಅವಿನಾಶ್ ಅವರಿಗೆ ನಷ್ಟವನ್ನುಂಟು ಮಾಡಿ ಮೋಸ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ : 66(ಸಿ) 66 (ಡಿ) ಐ.ಟಿ. ಆಕ್ಟ್., 318(4) ಬಿ ಎನ್ ಎಸ್ ರಂತೆ ಪ್ರಕರಣ ದಾಖಲಾಗಿದೆ.

error: No Copying!