ಬ್ರಹ್ಮಾವರ: ದಿನಾಂಕ 24.11.2024 (ಹಾಯ್ ಉಡುಪಿ ನ್ಯೂಸ್) ಯಡ್ತಾಡಿ ಗ್ರಾಮದ ಗರಿಕೆ ಮಠ ಪರಿಸರದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದಲ್ಲಿಗೆ ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶಾಂತರಾಜ್ ಬಿಕೆ ಅವರು ದಾಳಿ ನಡೆಸಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಶಾಂತರಾಜ್ ಬಿಕೆ ಅವರಿಗೆ ದಿನಾಂಕ : 22-11-2024 ರಂದು ಯಡ್ತಾಡಿ ಗ್ರಾಮದ ಗರಿಕೆ ಮಠ ಕಲ್ಲು ಕೋರೆಯಲ್ಲಿ ಅಕ್ರಮವಾಗಿ ಕಲ್ಲು ತೆಗೆದು, ಕಲ್ಲು ಗಳನ್ನು ಸಾಗಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಅವರು ಪಿಎಸ್‌ಐ ರವರ ಆದೇಶದಂತೆ ಕೂಡಲೇ ಸ್ಥಳಕ್ಕೆ ದಾಳಿ ನಡೆಸಿದಾಗ ಅಲ್ಲಿ ಪರವಾನಿಗೆ ಹೊಂದಿರುವ ಮಹಮ್ಮದ್ ಬಶೀರ್ ಹಾಗೂ ರಘುಪತಿ ರವರ ಕಲ್ಲು ಕೋರೆಗಳ ಸ್ಥಳವನ್ನು ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿ ಕಲ್ಲುಗಳನ್ನು ಸಾಗಾಟ ಮಾಡಿರುವುದು ಕಂಡುಬಂದಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಯಾರೋ ಅಪರಿಚಿತರು ಪರವಾನಿಗೆ ಇಲ್ಲದೇ ಅಕ್ರಮ ಕಲ್ಲುಗಣಿಗಾರಿಕೆ ನಡೆಸಿ ಕಲ್ಲುಗಳನ್ನು ಸಾಗಾಟ ಮಾಡಿ ಸರಕಾರಕ್ಕೆ ನಷ್ಟವುಂಟು ಮಾಡಿರುವುದು ತನಿಖೆ ಯಲ್ಲಿ ತಿಳಿದುಬಂದಿದೆ ಎನ್ನಲಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 4(1-a), 21(4) MMDR Act ಹಾಗೂ ಕಲಂ: 303(2) BNS ನಂತೆ ಪ್ರಕರಣ ದಾಖಲಾಗಿದೆ.