Spread the love

ಉಡುಪಿ: ಜಿಲ್ಲಾಧಿಕಾರಿಯವರಾಗಿರುವ ಡಾ: ಕೆ.ವಿದ್ಯಾ ಕುಮಾರಿ, ಐ.ಎ.ಎಸ್‌ ರವರ ಹೆಸರಿನಲ್ಲಿ ಯಾರೋ ನಕಲಿ ಫೇಸ್ ಬುಕ್ ಖಾತೆ ತೆರೆದು ಹಣ ಕೇಳುತ್ತಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯವರಾಗಿರುವ ಡಾ:ಕೆ.ವಿದ್ಯಾಕುಮಾರಿಯವರ ಹೆಸರಿನಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು  K.Vidya Kumari Ias ಎಂಬ ನಕಲಿ ಫೇಸ್ ಬುಕ್‌ ಖಾತೆಯನ್ನು ಸೃಷ್ಠಿಸಿ, ಅದರ ಪ್ರೋಫೈಲ್‌ ಗೆ ಡಾ: ಕೆ.ವಿದ್ಯಾಕುಮಾರಿ ಅವರ ಪೋಟೋವನ್ನು ದುರ್ಬಳಕೆ ಮಾಡಿ, ಅವರ ವೈಯಕ್ತಿಕ ಗೌರವಕ್ಕೆ ದಕ್ಕೆ ಉಂಟು ಮಾಡುವ ಉದ್ದೇಶದಿಂದ ನಕಲಿ ಫೇಸ್ಬುಕ್‌ ಖಾತೆಯನ್ನು ತೆರೆದು ಹಣವನ್ನು ಕೇಳುತ್ತಿರುವ ಆರೋಪಿಗಳ ವಿರುದ್ದ ಕಾನೂನುಕ್ರಮ ಕೈಗೊಳ್ಳ ಬೇಕೆಂದು ಡಾ:ಕೆ.ವಿದ್ಯಾಕುಮಾರಿಯವರು ಪೊಲೀಸರಿಗೆ  ದೂರು ನೀಡಿದ್ದಾರೆ.

ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ   ಕಲಂ:66 (ಸಿ) 66 (ಡಿ) ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿದೆ.

error: No Copying!